Connect with us

Bengaluru City

ಕೊರೊನಾ ಸುಳಿಯಲ್ಲಿ ಕೊಡಗು- ರಾಜ್ಯದಲ್ಲಿಂದು 3,382 ಮಂದಿಗೆ ಪಾಸಿಟಿವ್

Published

on

Share this

– ರಾಜ್ಯದಲ್ಲಿ 111 ಸಾವು, 12,763 ಮಂದಿ ಡಿಸ್ಚಾರ್ಜ್

ಬೆಂಗಳೂರು: ಕೊಡಗಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇಂದೂ 209 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವ್ ದರ ಶೇ.9.08ಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡಿದೆ. 3,382 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 111 ಮಂದಿ ಸಾವನ್ನಪ್ಪಿದ್ದಾರೆ.

ಇಂದು 12,763 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 76,505 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.97 ಮತ್ತು ಮರಣ ಪ್ರಮಾಣ ಶೇ.3.28ರಷ್ಟು ದಾಖಲಾಗಿದೆ. ಇದುವರೆಗೆ ರಾಜ್ಯದಲ್ಲಿ 35,040 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 28,43,810ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಒಟ್ಟು 1,71,112 ಸ್ಯಾಂಪಲ್ (ಆರ್ ಟಿಪಿಸಿಆರ್ 1,30,960+40,152 ರಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 813 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು 11 ಮಂದಿ ಸಾವನ್ನಪ್ಪಿದ್ದು, ಸದ್ಯ ಸಿಲಿಕಾನ್ ಸಿಟಿಯಲ್ಲಿ 43,698 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಇದುವರೆಗೂ ಮಹಾಮಾರಿ 15,626 ಜನರನ್ನು ಬಲಿ ಪಡೆದುಕೊಂಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 23, ಬಳ್ಳಾರಿ 23, ಬೆಳಗಾವಿ 116, ಬೆಂಗಳೂರು ಗ್ರಾಮಾಂತರ 72, ಬೆಂಗಳೂರು ನಗರ 813, ಬೀದರ್ 8, ಚಾಮರಾಜನಗರ 64, ಚಿಕ್ಕಬಳ್ಳಾಪುರ 34, ಚಿಕ್ಕಮಗಳೂರು 109, ಚಿತ್ರದುರ್ಗ 37, ದಕ್ಷಿಣ ಕನ್ನಡ 339, ದಾವಣಗೆರೆ 73, ಧಾರವಾಡ 35, ಗದಗ 18, ಹಾಸನ 265, ಹಾವೇರಿ 10, ಕಲಬುರಗಿ 17, ಕೊಡಗು 209, ಕೋಲಾರ 84, ಕೊಪ್ಪಳ 23, ಮಂಡ್ಯ 110, ಮೈಸೂರು 367, ರಾಯಚೂರು 7, ರಾಮನಗರ 18, ಶಿವಮೊಗ್ಗ 150, ತುಮಕೂರು 141, ಉಡುಪಿ 150, ಉತ್ತರ ಕನ್ನಡ 57, ವಿಜಯಪುರ 8 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

Advertisement