Connect with us

Bengaluru City

ಇಂದು 31,830 ಕೇಸ್, 180 ಸಾವು- ಮೈಸೂರು 2,042, ತುಮಕೂರು 1,196

Published

on

– ಬೆಂಗಳೂರಿನಲ್ಲಿ 17,550 ಪಾಸಿಟಿವ್, 97 ಬಲಿ
– 3 ಲಕ್ಷ ದಾಟಿದ ಸಕ್ರಿಯ ಪ್ರಕಣಗಳ ಸಂಖ್ಯೆ
– ಒಟ್ಟು ಸೋಂಕಿತರ ಸಂಖ್ಯೆ 14 ಲಕ್ಷಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾ ಸುನಾಮಿ ಆರ್ಭಟ ಮುಂದುವರಿದಿದ್ದು, ಇಂದು ಸಹ ಬರೋಬ್ಬರಿ 31,830 ಪ್ರಕರಣಗಳು ಪತ್ತೆಯಾಗಿದ್ದು, 180 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷ ಮೀರಿದ್ದು, ಈ ಮೂಲಕ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇತ್ತ ಉದ್ಯಾನ ನಗರಿ ಸ್ಥಿತಿ ಕ್ಷಣ ಕ್ಷಣಕ್ಕೂ ಭಯಾನಕವಾಗುತ್ತಿದ್ದು, ಇಂದು 17,550 ಜನರಿಗೆ ಕೊರೊನಾ ಸೋಂಕು ತಗುಲಿದೆ. ನಗರದಲ್ಲಿ ಇಂದು ಬರೋಬ್ಬರಿ 97 ಜನ ಸಾವನ್ನಪ್ಪಿದ್ದಾರೆ. ಸದ್ಯ ರಾಜಧಾನಿಯಲ್ಲಿ 2,06,223 ಸಕ್ರಿಯ ಪ್ರಕರಣಗಳಿದ್ದು, ಬೆಡ್ ಮತ್ತು ಆಕ್ಸಿಜನ್ ಕೊರತೆಯಿಂದ ಜನ ನರಳುವಂತಾಗಿದೆ.

ರಾಜ್ಯದಲ್ಲಿ 3,01,899 ಸಕ್ರಿಯ ಪ್ರಕರಣಗಳಿದ್ದು, 2,063 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 14,00,775ಕ್ಕೆ ಏರಿಕೆಯಾಗಿದೆ. ಇಂದು 10,793 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.18.71 ಮತ್ತು ಮರಣ ಪ್ರಮಾಣ ಶೇ.0.56ಕ್ಕೆ ಏರಿಕೆಯಾಗಿದೆ. ಈ ವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 14,807ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 283, ಬಳ್ಳಾರಿ 907, ಬೆಳಗಾವಿ 219, ಬೆಂಗಳೂರು ಗ್ರಾಮಾಂತರ 599, ಬೆಂಗಳೂರು ನಗರ 17,550, ಬೀದರ್ 328, ಚಾಮರಾಜನಗರ 212, ಚಿಕ್ಕಬಳ್ಳಾಪುರ 544, ಚಿಕ್ಕಮಗಳೂರು 275, ಚಿತ್ರದುರ್ಗ 145, ದಕ್ಷಿಣ ಕನ್ನಡ 486, ದಾವಣಗೆರೆ 300, ಧಾರವಾಡ 423, ಗದಗ 119, ಹಾಸನ 503, ಹಾವೇರಿ 99, ಕಲಬುರಗಿ 772, ಕೊಡಗು 373, ಕೋಲಾರ 548, ಕೊಪ್ಪಳ 382, ಮಂಡ್ಯ 737, ಮೈಸೂರು 2,042, ರಾಯಚೂರು 736, ರಾಮನಗರ 169, ಶಿವಮೊಗ್ಗ 256, ತುಮಕೂರು 1,196, ಉಡುಪಿ 447, ಉತ್ತರ ಕನ್ನಡ 205, ವಿಜಯಪುರ 531 ಮತ್ತು ಯಾದಗಿರಿಯಲ್ಲಿ 414 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *