Connect with us

Bengaluru City

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ಕೊಂಚ ಏರಿಕೆ- ಇಂದು 3,104 ಹೊಸ ಕೇಸ್

Published

on

Share this

– 92 ಸಾವು, 4,992 ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕೊಂಚ ಏರಿಕೆ ಕಂಡಿದ್ದು, ಇಂದು 3,104 ಹೊಸ ಪ್ರಕರಣಗಳು ವರದಿಯಾಗಿವೆ. 92 ಮಂದಿ ಸಾವನ್ನಪ್ಪಿದ್ದು, 4,992 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ರಾಜ್ಯದಲ್ಲಿ 40,016 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.2.65 ಮತ್ತು ಮರಣ ಪ್ರಮಾಣ ಶೇ.2.96ರಷ್ಟು ದಾಖಲಾಗಿದೆ. ಇದುವರೆಗೆ ರಾಜ್ಯದಲ್ಲಿ 35,526 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 28,59,595ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಒಟ್ಟು 1,16,912 ಸ್ಯಾಂಪಲ್ (ಆರ್‍ಟಿ ಪಿಸಿಆರ್ 83,104 + 33,808 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 715 ಮಂದಿಗೆ ಕೊರೊನಾ ಸೋಂಕು ತಗುಲಿದೆ. 1,863 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. 15 ಮಂದಿ ಸಾವನ್ನಪ್ಪಿದ್ದು, ಸದ್ಯ ಸಿಲಿಕಾನ್ ಸಿಟಿಯಲ್ಲಿ 14,232 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಇದುವರೆಗೂ ಮಹಾಮಾರಿ 15,690 ಜನರನ್ನು ಬಲಿ ಪಡೆದುಕೊಂಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 5, ಬಳ್ಳಾರಿ 24, ಬೆಳಗಾವಿ 157, ಬೆಂಗಳೂರು ಗ್ರಾಮಾಂತರ 67, ಬೆಂಗಳೂರು ನಗರ 715, ಬೀದರ್ 6, ಚಾಮರಾಜನಗರ 68, ಚಿಕ್ಕಬಳ್ಳಾಪುರ 29, ಚಿಕ್ಕಮಗಳೂರು 109, ಚಿತ್ರದುರ್ಗ 64, ದಕ್ಷಿಣ ಕನ್ನಡ 216, ದಾವಣಗೆರೆ 60, ಧಾರವಾಡ 29, ಗದಗ 7, ಹಾಸನ 270, ಹಾವೇರಿ 14, ಕಲಬುರಗಿ 15, ಕೊಡಗು 140, ಕೋಲಾರ 108, ಕೊಪ್ಪಳ 15, ಮಂಡ್ಯ 113, ಮೈಸೂರು 389, ರಾಯಚೂರು 4, ರಾಮನಗರ 32, ಶಿವಮೊಗ್ಗ 119, ತುಮಕೂರು 138, ಉಡುಪಿ 114, ಉತ್ತರ ಕನ್ನಡ 72, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

Advertisement