Connect with us

Bengaluru City

3,014 ಹೊಸ ಕೊರೊನಾ ಪ್ರಕರಣ- 7,468 ಡಿಸ್ಚಾರ್ಜ್

Published

on

ಬೆಂಗಳೂರು: ಕೊರೊನಾ ಸಂಖ್ಯೆಯಲ್ಲಿ ಇವತ್ತು ಸಹ ಇಳಿಮುಖವಾಗಿದ್ದು, ಇಂದು 3,014 ಮಂದಿಗೆ ಮಹಾಮಾರಿಯ ಸೋಂಕು ತಗುಲಿದೆ. ರಾಜ್ಯದಲ್ಲಿಂದು 7,468 ಮಂದಿಗೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ರಾಜ್ಯದಲ್ಲಿ 28 ಸೋಂಕಿತರು ಸಾವನ್ನಪ್ಪಿದ್ದು, ಕೊರೊನಾದಿಂದ ಬಲಿಯಾದವರ ಸಂಖ್ಯೆ 11,168ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8,23,412ಕ್ಕೆ ಏರಿಕೆಯಾಗಿದ್ದು, 55,017 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ 956 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.2.96 ಮತ್ತು ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಶೇ.0.92 ಇದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 24, ಬಳ್ಳಾರಿ 70, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 44, ಬೆಂಗಳೂರು ನಗರ 1,621, ಬೀದರ್ 3, ಚಾಮರಾಜನಗರ 28, ಚಿಕ್ಕಬಳ್ಳಾಪುರ 33, ಚಿಕ್ಕಮಗಳೂರು 35, ಚಿತ್ರದುರ್ಗ 59, ದಕ್ಷಿಣ ಕನ್ನಡ 95, ದಾವಣಗೆರೆ 47, ಧಾರವಾಡ 27, ಗದಗ 23, ಹಾಸನ 173, ಹಾವೇರಿ 29, ಕಲಬುರಗಿ 32, ಕೊಡಗು 17, ಕೋಲಾರ 47, ಕೊಪ್ಪಳ 8, ಮಂಡ್ಯ 89, ಮೈಸೂರು 161, ರಾಯಚೂರು 16, ರಾಮನಗರ 12, ಶಿವಮೊಗ್ಗ 18, ತುಮಕೂರು 53, ಉಡುಪಿ 49, ಉತ್ತರ ಕನ್ನಡ 24, ವಿಜಯಪುರ 122 ಮತ್ತು ಯಾದಗಿರಿಯಲ್ಲಿ 20 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *