Crime
3 ವರ್ಷದ ಮಗಳನ್ನ ಕೊಂದು ಸಮಾಧಿ ಮಾಡಿದ ತಂದೆ!

ದಾವಣಗೆರೆ: ತಂದೆಯೇ ಮೂರು ವರ್ಷದ ಮಗಳನ್ನು ಕೊಲೆಗೈದು ಸಮಾಧಿ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಗುತ್ತಿದುರ್ಗದಲ್ಲಿ ನಡೆದಿದೆ. ಮೂರು ವರ್ಷದ ಸಿರಿಶಾ ಕೊಲೆಯಾದ ಮಗು.
ನಿಂಗಪ್ಪ ಮಗಳನ್ನ ಕೊಲೆಗೈದ ತಂದೆ. ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಮಗಳನ್ನು ಶವ ಮಾಡಿರುವ ಸ್ಥಳದ ಮಾಹಿತಿ ಲಭ್ಯವಾಗಿದೆ. ಇಂದು ದಾವಣಗೆರೆ ಮತ್ತು ಚಿತ್ರದುರ್ಗ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮೊದಲ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳಿದ್ದರೂ ನಿಂಗಪ್ಪ ಎರಡನೇ ಮದುವೆಯಾಗಿದ್ದನು. ಎರಡನೇ ಪತ್ನಿ ಶಶಿಕಲಾ ಜೊತೆಯಲ್ಲಿಯೇ ನಿಂಗಪ್ಪ ವಾಸವಾಗಿದ್ದನು ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಮಗಳನ್ನ ಕರೆದುಕೊಂಡು ಹೋಗಿದ್ದ ನಿಂಗಪ್ಪ ಆಕೆಯನ್ನ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಶಶಿಕಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಗುತ್ತಿದುರ್ಗದ ಗ್ರಾಮಸ್ಥರು ಮಗು ಸಮಾಧಿ ಮಾಡಿರುವ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
