ಗುಪ್ತಾಂಗ ದಪ್ಪಗಾಗಿ, ಸುಟ್ಟು ಗಾಯಗಳಿಂದ 3 ವರ್ಷದ ಬಾಲಕ ಅನುಮಾನಸ್ಪದ ಸಾವು

ಕೋಲಾರ: 3 ವರ್ಷದ ಬಾಲಕ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಗ ಹಠ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಹೆತ್ತವರೆ ಚಿತ್ರಹಿಂಸೆ ಕೊಟ್ಟು ಕೊಂದ್ರು ಎಂಬ ಅನುಮಾನ ಮೂಡಿದ್ದು, ಸದ್ಯ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಮಾಸ್ತಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಪೃತ್ವಿಕ್ (3) ಅನುಮಾನಸ್ಪದವಾಗಿ ಸಾವಿಗೀಡಾದ ಮಗು. ತಂದೆ ಹರೀಶ್ ಹಾಗೂ ತಾಯಿ ರೇಣುಕಾ ದಂಪತಿಯೆ ಮಗುವನ್ನ ಹೊಡೆದು ಕೊಂದ್ರು ಎಂಬ ಅನುಮಾನ ಮೂಡಿದೆ.

ಗುಪ್ತಾಂಗ ದಪ್ಪಗಾಗಿ, ಸುಟ್ಟು ಗಾಯಗಳಾಗಿರುವ ಮೃತ ಬಾಲಕನ ತಲೆಗೆ ಬಲವಾಗಿ ಹೊಡೆದ ಗಾಯಗಳಾಗಿವೆ. ಗಾಯಗಳಿಂದ ತೀವ್ರ ಅಸ್ವಸ್ಥವಾದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ತಂದೆ ತಾಯಿ ವಿರುದ್ದ 304 ಸೆಕ್ಷನ್ ಅಡಿಯಲ್ಲಿ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *