Connect with us

ಗುಣಮುಖರ ಸಂಖ್ಯೆ ಹೆಚ್ಚಳ – 52,253 ಡಿಸ್ಚಾರ್ಜ್, 22,823 ಪಾಸಿಟಿವ್

ಗುಣಮುಖರ ಸಂಖ್ಯೆ ಹೆಚ್ಚಳ – 52,253 ಡಿಸ್ಚಾರ್ಜ್, 22,823 ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿಂದು 22,823 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 52,253 ಜನರು ಗುಣಮುಖರಾಗಿದ್ದಾರೆ. ಇಂದು ಕೊರೊನಾಗೆ 401 ಸೋಂಕಿತರು ಪ್ರಾಣ ಕಳೆದುಕೊಂಡಿದ್ದು, ಇದುವರೆಗೂ ಮಹಾಮಾರಿಗೆ ರಾಜ್ಯದಲ್ಲಿ 27,806 ಜನ ಸಾವನ್ನಪ್ಪಿದ್ದಾರೆ.

ಸದ್ಯ 3,72,373 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.16.42 ಮತ್ತು ಮರಣ ಪ್ರಮಾಣ ಶೇ.1.75ರಷ್ಟಿದೆ. ಇಂದು 1,38,983 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಟ್ಟು 1,90,825 ಮಂದಿಗೆ ಲಸಿಕೆ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 5,736 ಹೊಸ ಪ್ರಕರಣಗಳು ವರದಿಯಾಗಿದ್ದು, ಸದ್ಯ 2,80,697 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿಂದು 192 ಸೋಂಕಿತರು ಸಾವನ್ನಪ್ಪಿದ್ದು, 31,237 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು 5,736, ಬೆಳಗಾವಿ 1,147, ಬೆಂಗಳೂರು ನಗರ 5,949, ಹಾಸನ 1,505, ಮೈಸೂರು 2,240, ತುಮಕೂರಿನಲ್ಲಿ 1,219ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Advertisement
Advertisement