Connect with us

Bengaluru City

ಮತ್ತೆ ದಾಖಲೆ, 25,795 ಕೇಸ್ ಪತ್ತೆ, 123 ಸಾವು- ತುಮಕೂರು 1,231, ಬಳ್ಳಾರಿ 940

Published

on

– ಬೆಂಗಳೂರಿನಲ್ಲಿ 15,244 ಪಾಸಿಟಿವ್, 68 ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಸೋಂಕಿತರ ಸಂಖ್ಯೆಯಲ್ಲಿ ನಿತ್ಯ ಹೆಚ್ಚಳವಾಗುವ ಮೂಲಕ ದಾಖಲೆಯಾಗುತ್ತಿದೆ. ಇಂದು ಬರೋಬ್ಬರಿ 25,795 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 123 ಜನ ಸಾವನ್ನಪ್ಪಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ. ಇತ್ತ ಸಿಲಿಕಾನ್ ಸಿಟಿ ಸ್ಥಿತಿ ಕ್ಷಣ ಕ್ಷಣಕ್ಕೂ ಭಯಾನಕವಾಗುತ್ತಿದ್ದು, ಇಂದು 15,244 ಜನರನ್ನು ಕೊರೊನಾ ಸೋಂಕು ಆವರಿಸಿದೆ. ನಗರದಲ್ಲಿ ಇಂದು ಬರೋಬ್ಬರಿ 68 ಜನ ಸಾವನ್ನಪ್ಪಿದ್ದಾರೆ. ಸದ್ಯ ರಾಜಧಾನಿಯಲ್ಲಿ 1,37,813 ಸಕ್ರಿಯ ಪ್ರಕರಣಗಳಿದ್ದು, ಬೆಡ್ ಮತ್ತು ಆಕ್ಸಿಜನ್ ಕೊರತೆಯಿಂದ ಜನ ನರಳುವಂತಾಗಿದೆ.

ರಾಜ್ಯದಲ್ಲಿ 1,96,236 ಸಕ್ರಿಯ ಪ್ರಕರಣಗಳಿದ್ದು, 243 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 12,47,997ಕ್ಕೆ ಏರಿಕೆಯಾಗಿದೆ. ಇಂದು 5,624 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.15.87 ಮತ್ತು ಮರಣ ಪ್ರಮಾಣ ಶೇ.0.47ಕ್ಕೆ ಏರಿಕೆಯಾಗಿದೆ. ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ 13,885ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 134, ಬಳ್ಳಾರಿ 940, ಬೆಳಗಾವಿ 255, ಬೆಂಗಳೂರು ಗ್ರಾಮಾಂತರ 405, ಬೆಂಗಳೂರು ನಗರ 15,244, ಬೀದರ್ 396, ಚಾಮರಾಜನಗರ 271, ಚಿಕ್ಕಬಳ್ಳಾಪುರ 329, ಚಿಕ್ಕಮಗಳೂರು 146, ಚಿತ್ರದುರ್ಗ 142, ದಕ್ಷಿಣ ಕನ್ನಡ 474, ದಾವಣಗೆರೆ 157, ಧಾರವಾಡ 361, ಗದಗ 73, ಹಾಸನ 689, ಹಾವೇರಿ 46, ಕಲಬುರಗಿ 659, ಕೊಡಗು 156, ಕೋಲಾರ 587, ಕೊಪ್ಪಳ 121, ಮಂಡ್ಯ 385, ಮೈಸೂರು 818, ರಾಯಚೂರು 433, ರಾಮನಗರ 260, ಶಿವಮೊಗ್ಗ 207, ತುಮಕೂರು 1,231, ಉಡುಪಿ 274, ಉತ್ತರ ಕನ್ನಡ 163, ವಿಜಯಪುರ 328 ಮತ್ತು ಯಾದಗಿರಿಯಲ್ಲಿ 111 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *