Connect with us

Crime

ಭೇಟಿಗೆ ಬಂದ ಯುವತಿ ಮೇಲೆ ನಾಲ್ವರಿಂದ ರೇಪ್

Published

on

-ಗೆಳೆಯರ ಜೊತೆ ಸೇರಿ ಅತ್ಯಾಚಾರ ನಡೆಸಿ ಹಲ್ಲೆ
-ಕಾಮುಕರ ಬಂಧನ, ಸಂತ್ರಸ್ತೆ ಆಸ್ಪತ್ರೆಗೆ ದಾಖಲು

ಗುರುಗ್ರಾಮ: ಪರಿಚಯಸ್ಥನ ಭೇಟಿಗೆ ಆಗಮಿಸಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದ ನಾಲ್ವರು ಕಾಮುಕರನ್ನ ಪೊಲೀಸರು ಬಂಧಿಸಿದ್ದಾರೆ. ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಸಂತ್ರಸ್ತೆಯನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪವನ್, ರಂಜನ್, ಪಂಕಜ್ ಮತ್ತು ಗೋವಿಂದ್ ಬಂಧಿತ ಆರೋಪಿಗಳು. ಗುರುಗ್ರಾಮದ ಡಿಎಲ್‍ಎಫ್ ಫೇಜ್ 2 ಇಲಾಖೆಯ ಕಚೇರಿಯಲ್ಲಿ ಅತ್ಯಾಚಾರ ನಡೆದಿದೆ. ನಾಲ್ವರು ಆರೋಪಿಗಳಲ್ಲಿ ಓರ್ವನ ಪರಿಚಯ ಯುವತಿಗಿತ್ತು. ಈ ಯುವಕನ ಭೇಟಿಗೆ ಯುವತಿ ಬಂದಿದ್ದಳು. ಈ ವೇಳೆ ಗ್ಯಾಂಗ್ ರೇಪ್ ನಡೆದಿದೆ.

ಅತ್ಯಾಚಾರದ ಬಳಿಕ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ತಲೆ ಭಾಗದಲ್ಲಿ ಸಂತ್ರಸ್ತೆಗೆ ಗಾಯಗಳಾಗಿವೆ. ಘಟನೆ ನಡೆದ ಸ್ಥಳದಲ್ಲಿ ಗಾಜು, ನೆಲದ ಮೇಲೆ ರಕ್ತದ ಕಲೆಗಳು ಕಂಡು ಬಂದಿವೆ ಎಂದು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *