ಲಿಮಾ: 60 ಮಂದಿ ಪ್ರಯಾಣಿಕರಿದ್ದ ಬಸ್ ಭೀಕರ ದುರಂತಕ್ಕೀಡಾಗಿದ್ದು (Bus Accident), ಕನಿಷ್ಠ 24 ಮಂದಿ ಸಾವನ್ನಪ್ಪಿರುವ ಘಟನೆ ಪೆರುವಿನ (Peru) ವಾಯುವ್ಯ ಭಾಗದಲ್ಲಿ ನಡೆದಿದೆ.
ವಾಯುವ್ಯ ಪೆರುವಿನಲ್ಲಿ ಬಂಡೆಯ ಮೇಲೆ ಬಸ್ ಉರುಳಿಬಿದ್ದು ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!
ಕೊರಿಯಾಂಕಾ ಟೂರ್ಸ್ ಕಂಪನಿಗೆ ಸೇರಿದ ಬಸ್, ಲಿಮಾದಿಂದ ಹೊರಟು, ಈಕ್ವೆಡಾರ್ ಗಡಿಯಲ್ಲಿರುವ ತುಂಬೆಸ್ಗೆ ತೆರಳುತ್ತಿತ್ತು. ಈ ವೇಳೆ ಆರ್ಗಾನೋಸ್ ಪಟ್ಟಣದ ಬಳಿ ಚಲಿಸುತ್ತಿದ್ದಾಗ `ಡೆವಿಲ್ಸ್ ಕರ್ವ್’ (Devil’s Curve) ಎಂದು ಕರೆಯಲ್ಪಡುವ ಸ್ಥಳದಲ್ಲಿ ದುರಂತ ಸಂಭವಿಸಿದೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ
ಅಪಘಾತ ಸಂಭವಿಸುತ್ತಿದ್ದಂತೆ ಕೆಲವರು ಬಸ್ಸಿನಿಂದ ಹೊರಬಿದ್ದಿದ್ದಾರೆ. ಇನ್ನೂ ಕೆಲವರು ಬಸ್ನಲ್ಲೇ ಸಿಲುಕಿಕೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಕೆಲವರನ್ನ ಇಲ್ಲಿನ ಎಲ್ ಆಲ್ಟೊ ಮತ್ತು ಮಂಕೋರಾದಲ್ಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕೆಲವು ಪ್ರಯಾಣಿಕರು ಕೆರೆಬಿಯನ್ ಹೈಟಿ ದೇಶದಿಂದ ಬಂದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k