Connect with us

Bengaluru City

ರಾಜ್ಯದಲ್ಲಿ ಇಂದು 2,082 ಹೊಸ ಪ್ರಕರಣ- 7,751 ಮಂದಿ ಸೋಂಕಿತರು ಡಿಸ್ಚಾರ್ಜ್

Published

on

Share this

ಬೆಂಗಳೂರು: ರಾಜ್ಯದಲ್ಲಿ ಇಂದು 2,082 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 86 ಮಂದಿ ಸಾವನ್ನಪ್ಪಿದ್ದಾರೆ.

ಇಂದು 7,751 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 48,116 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.21.34 ಮತ್ತು ಮರಣ ಪ್ರಮಾಣ ಶೇ.4.13ರಷ್ಟು ದಾಖಲಾಗಿದೆ. ಇದುವರೆಗೆ ರಾಜ್ಯದಲ್ಲಿ 35,308 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 28,52,079ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಒಟ್ಟು 1,54,655 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,18,536 + 36,119 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 481 ಮಂದಿಗೆ ಕೊರೊನಾ ಸೋಂಕು ತಗುಲಿದೆ. 4,484 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. 10 ಮಂದಿ ಸಾವನ್ನಪ್ಪಿದ್ದು, ಸದ್ಯ ಸಿಲಿಕಾನ್ ಸಿಟಿಯಲ್ಲಿ 19,411 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಇದುವರೆಗೂ ಮಹಾಮಾರಿ 15,665 ಜನರನ್ನು ಬಲಿ ಪಡೆದುಕೊಂಡಿದೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಅನ್‍ಲಾಕ್ 3.O ಘೋಷಣೆ

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 5, ಬಳ್ಳಾರಿ 20, ಬೆಳಗಾವಿ 91, ಬೆಂಗಳೂರು ಗ್ರಾಮಾಂತರ 55, ಬೆಂಗಳೂರು ನಗರ 481, ಬೀದರ್ 7, ಚಾಮರಾಜನಗರ 36, ಚಿಕ್ಕಬಳ್ಳಾಪುರ 21, ಚಿಕ್ಕಮಗಳೂರು 79, ಚಿತ್ರದುರ್ಗ 18, ದಕ್ಷಿಣ ಕನ್ನಡ 214, ದಾವಣಗೆರೆ 48, ಧಾರವಾಡ 43, ಗದಗ 5, ಹಾಸನ 202, ಹಾವೇರಿ 10, ಕಲಬುರಗಿ 20, ಕೊಡಗು 25, ಕೋಲಾರ 47, ಕೊಪ್ಪಳ 9, ಮಂಡ್ಯ 72, ಮೈಸೂರು 227, ರಾಯಚೂರು 3, ರಾಮನಗರ 6, ಶಿವಮೊಗ್ಗ 108, ತುಮಕೂರು 89, ಉಡುಪಿ 102, ಉತ್ತರ ಕನ್ನಡ 28, ವಿಜಯಪುರ 5 ಮತ್ತು ಯಾದಗಿರಿಯಲ್ಲಿ 6 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

Advertisement