Connect with us

Dina Bhavishya

2021ರ ದ್ವಾದಶ ರಾಶಿಗಳ ಫಲಾಫಲ

Published

on

2020ಕ್ಕೆ ಬೈ ಹೇಳಿ 2021 ಬರಮಾಡಿಕೊಳ್ಳುವ ಸಮಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕೊರೊನಾ, ಲಾಕ್‍ಡೌನ್, ನಿರುದ್ಯೋಗ, ಆರ್ಥಿಕ ಸಂಕಷ್ಟ ಹೀಗೆ ಸಾಲು ಸಾಲು ಸಮಸ್ಯೆಗಳನ್ನ 2020 ಒಳಗೊಂಡಿತ್ತು. 2021ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ.

ಮೇಷ: ಕೆಲ ಕಾರ್ಯದಲ್ಲಿ ಬದಲಾವಣೆ, ಕ್ಷೇತ್ರದ ಪರಿವರ್ತನೆ, ವಾಹನ, ಜಮೀನು ಖರೀದಿ, ಮಾರಾಟ ನಡೆಯಲಿದೆ, ಯೋಗ ಪ್ರಾಪ್ತಿಗೆ ತದ್ವಿರುದ್ಧವಾಗಿ ಹೋದರೆ ನಷ್ಟವಾಗಲಿದೆ, ರೋಗ, ರುಜಿನಾದಿ ಚಿಂತನೆ ಜಾಸ್ತಿ. ಆರೋಗ್ಯದ ಕಡೆ ಗಮನ ಕೊಡಿ, ಶನಿಯ ಮೂರನೇ ದೃಷ್ಟಿಯಿಂದ ಅಧಿಕ ಖರ್ಚು ಬರಲಿದೆ, ಅವಸರದ ನಿರ್ಧಾರ ಬೇಡ.

ವೃಷಭ: ಈ ರಾಶಿಗೆ ಭಾಗ್ಯಪ್ರದ ಗುರು ಯೋಗ, ಸಾಧನೆಗಳನ್ನು ಹೊರಗೆ ತೋರಿಸುವ ಅವಧಿ, ಶಕ್ತಿ ಹೊರಗಡೆ ತೋರುವ ಕಾಲ, ಸಹೋದರ ವೈಮನಸ್ಯ ನಿವಾರಣೆ

ಮಿಥುನ: ಕೆಟ್ಟಕಾಲ ಕೆಟ್ಟದ್ದನ್ನಾಗಿ ಮಾಡಿಕೊಳ್ಳಬೇಡಿ, ಅಷ್ಟಮದಲ್ಲಿ ಶನಿ ಇರಲಿದ್ದು, ಏಪ್ರಿಲ್ ತನಕ ಅಷ್ಟಮದಲ್ಲೂ ಗುರು ಇರುತ್ತಾನೆ. ರೋಗ, ಅವಮಾನ, ಅನಾರೋಗ್ಯ ಮಾನಸಿಕ ಹಿಂಸೆ, ಅಧಿಕಾರ, ಹುದ್ದೆಯಲ್ಲಿರುವವರಿಗೆ ಖಿನ್ನತೆ. ತಟಸ್ಥರಾಗಿರಿ.

ಕರ್ಕಾಟಕ: ಸಪ್ತಮ ಗುರು, ಅವಿವಾಹಿತರಿಗೆ ವಿವಾಹ ಯೋಗ, ಜಾತಕ ರೀತಿ ದೋಷ ಪರಿಹಾರ ಮಾಡಿ, ಸಹೋದರ ಕಲಹ ನಿವಾರಣೆ ಆಗಬಹುದು

ಸಿಂಹ: ಷಷ್ಠಿ ಸ್ಥಾನದಲ್ಲಿ ಗುರು ಇದ್ದಾನೆ, ಕೋರ್ಟು ಕಚೇರಿ ಅನಾವಶ್ಯಕ ಓಡಾಟ ಸಂಭವ, ಎಚ್ಚರಿಕೆಯಿಂದ ಇರಿ, ತಜ್ಞರ ಸಲಹೆ ಪಡೆಯಿರಿ.

ಕನ್ಯಾ: ಪಂಚಮದಲ್ಲಿ ಗುರು, ಮಕ್ಕಳ ಕಾಳಜಿ, ಚಿಂತೆ ಬೇಡ, ನೊಂದುಕೊಳ್ಳದೆ ಸಮಸ್ಯೆ ಪರಿಹಾರ ಆಗಲಿದೆ, ಅಭಿವೃದ್ಧಿ, ಶಿಕ್ಷಣ, ಮದುವೆ.

ತುಲಾ: ಚತುರ್ಥ ಸ್ಥಾನದಲ್ಲಿ ಗುರು, ಉತ್ತಮ ಫಲ, ಉದ್ಯೋಗ ಪರಿವರ್ತನೆ ಕಾಲ, ವಾಹನ ಖರೀದಿ, ಕ್ಷೇತ್ರದ ಪರಿವರ್ತನೆ, ಜಮೀನು ಪರಿವರ್ತನೆ ಆಗಲಿದೆ

ವೃಶ್ಚಿಕ: ಏಪ್ರಿಲ್ ತನಕ ತೃತಿಯ ಸ್ಥಾನದಲ್ಲಿ ಗುರು ಇರಲಿದ್ದಾನೆ, ಉದ್ವೇಗ ಹೆಚ್ಚಾಗುವ ಸಾಧ್ಯತೆ, ಉದ್ವೇಗ, ಸ್ಥಾನ ನಾಶ ನಾಡಬಹುದು, ಪ್ರಾಯಸ್ತರಿಗೆ ಬಿಪಿ ಶುಗರ್ ಏರಬಹುದುನಿಶ್ಚಿಂತೆ ವಹಿಸಿ, ಅಧಿಕ ಪ್ರಸಂಗ ಬೇಡ

ಧನಸ್ಸು: ದ್ವಿತೀಯ ಸ್ಥಾನದಲ್ಲಿ ಗುರು, ಒಳ್ಳೆಯ ಸಮಯ, ಒಳ್ಳೇ ಸಂಪಾದನೆ, ಕುಟುಂಬದ ವಿಚಾರ ಉತ್ತಮ, ಕರ್ಮಸ್ಥಾನ ಗುರು ವೀಕ್ಷಣೆ ಮಾಡಲಿದ್ದಾನೆ, ಶನಿ ಕಲಹ ಮಾಡಿಸಬಹುದು, ಮಿತ್ರತ್ವ ಹಾಳಾಗಬಹುದು, ಜಾಗೃತೆ ವಹಿಸಿ, ವಿವೇಚನೆ ಬೆಳೆಸಿ

ಮಕರ: ನೀಚ ಸ್ಥಾನದಲ್ಲಿ ಗುರು, ಕೆಟ್ಟಮೇಲೆ ಬುದ್ಧಿ, ಗಲಾಟೆ ಮಾಡಿ ಆಮೇಲೆ ಕ್ಷಮೆ ಕೇಳುವ ಪ್ರಸಂಗ, ಅವಿವಾಹಿತರಾಗಿದ್ದರೆ ಸಕಾಲದಲ್ಲೇ ವಿವಾಹ, ಸಂತಾನ ಭಾಗ್ಯ ಯೋಗ, ದುಃಖ ಪರಿವರ್ತನೆ ಆಗಲಿದೆ, ಸುಖ ಸಿಗಲಿದೆ

ಕುಂಭ: ಸಾಡೇಸಾತ್ ಶನಿ ಕಾಟ ಇದೆ, ರಾಹು ಆಲಸ್ಯ ಕೊಡಬಹುದು, ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಿ, ವ್ಯಯ ಕಮ್ಮಿ ಮಾಡಿ, ಆಲಸ್ಯ ಬಿಡಿ, ಅಭಿವೃದ್ಧಿ ಕಾಲ ಅಲ್ಲ, ವಾತಾವರಣ, ಸರಿಪಡಿಸಿಕೊಳ್ಳಿ, ಮುಂದೆ ಶುಭಕಾಲ ಬರಲಿದೆ

ಮೀನ: ಗುರು ಶನಿ ಬಂಧನದಲ್ಲಿದ್ದಾರೆ. ಲಾಭ ಕೊಡುವವ ಬಂಧನದಲ್ಲಿ ಇದ್ದಾನೆ, ಕನ್ನಡಿಯ ಬಿಂಬಕ್ಕೆ ಹಪಹಪಿಸಬೇಡಿ, ಲಾಭಕ್ಕಾಗಿ ಕಾಯಿರಿ, ಒಳ್ಳೇದಾಗುತ್ತದೆ, ವಾಹನ, ಭೂಮಿ ಖರೀದಿಗೆ ಅತ್ಯುತ್ತಮ ಕಾಲ

Click to comment

Leave a Reply

Your email address will not be published. Required fields are marked *

www.publictv.in