Connect with us

Latest

ಅಸಹಿಷ್ಣುತೆಯ ಮತ್ತೊಂದು ಹೆಸರು ಮಮತಾ ಬ್ಯಾನರ್ಜಿ: ಜೆ.ಪಿ.ನಡ್ಡಾ

Published

on

ಕೋಲ್ಕತ್ತಾ: ಅಸಹಿಷ್ಣುತೆಯ ಮತ್ತೊಂದು ಹೆಸರು ಸಿಎಂ ಮಮತಾ ಬ್ಯಾನರ್ಜಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಇಂದು ಮಿಷನ್ ಬಂಗಾಲ್ ಹಿನ್ನೆಲೆ ಕೋಲ್ಕತ್ತಾಗೆ ಅಗಮಿಸಿರುವ ಜೆ.ಪಿ.ನಡ್ಡಾರನ್ನ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ವಿಮಾನ ನಿಲ್ದಾಣದ ಮುಂಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಮಹಿಳಾ ಕಾರ್ಯಕರ್ತರು ಶಂಖ ಮೊಳಗಿಸುವ ಸ್ವಾಗತಿಸಿದರು. 2021ರ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳಕ್ಕೆ ಆಗಮಿಸಿರುವ ನಡ್ಡಾ, ವರ್ಚೂವಲ್ ಮಾಧ್ಯಮದ ಮೂಲಕ ಬಿಜೆಪಿಯ 9 ಕಚೇರಿಗಳನ್ನ ಉದ್ಘಾಟಿಸಿದರು.

ಈ ವೇಳೆ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಜೆ.ಪಿ.ನಡ್ಡಾ, ಉಳಿದೆಲ್ಲ ಪಾರ್ಟಿಗಳ ಚಟುವಟಿಕೆಗಳು ಮನೆಯಿಂದಲೇ ನಡೆಯುತ್ತವೆ. ಕೆಲ ಪಾರ್ಟಿಗಳು ಕುಟುಂಬಗಳಾಗಿ ಬದಲಾಗಿವೆ. ಟಎಂಸಿ ಸಹ ಇದಕ್ಕಿಂತ ಹೊರತಲ್ಲ. ಆದ್ರೆ ಬಿಜೆಪಿಗೆ ಪಕ್ಷವೇ ಕುಟುಂಬ ಎಂದು ಹೇಳಿದರು.

ವರ್ಷದಿಂದ ವರ್ಷಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಬಿಜೆಪಿಯ ಶೇಕಡವಾರು ಮತ ಗಳಿಕೆ ಹೆಚ್ಚಾಗುತ್ತಿದೆ. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ ಎಂದು ನಡ್ಡಾ ಭವಿಷ್ಯ ನುಡಿದರು. ಇನ್ನು ತಮ್ಮ ಮೊದಲ ಚುನಾವಣಾ ಸಮಾವೇಶವನ್ನ ಮಮತಾ ಬ್ಯಾನರ್ಜಿ ಕ್ಷೇತ್ರ ಭವಾನಿಪುರದಿಂದ ಆರಂಭಿಸಿದ್ದಾರೆ.

Click to comment

Leave a Reply

Your email address will not be published. Required fields are marked *