Connect with us

Bengaluru City

2,016 ಹೊಸ ಕೊರೊನಾ ಪ್ರಕರಣ – 17 ಸಾವು

Published

on

ಬೆಂಗಳೂರು: ರಾಜ್ಯದಲ್ಲಿಂದು 2,016 ಮಂದಿಗೆ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, 17 ಸೋಂಕಿತರು ಸಾವನ್ನಪ್ಪಿದ್ದಾರೆ.

ಇಂದು ಕೊರೊನಾದಿಂದ ಗುಣಮುಖರಾಗಿ 3,443 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 28,026 ಸಕ್ರಿಯ ಪ್ರಕರಣಗಳಿವೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8,57,928 ಏರಿಕೆಯಾಗಿದ್ದು, ಇದುವರೆಗೂ 11,491 ಜನರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಸದ್ಯ 781 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳು ಪ್ರಮಾಣ ಶೇ.1.71 ಮತ್ತು ಮೃತಪಟ್ಟವರ ಪ್ರಮಾಣ ಶೇ.0.84ರಷ್ಟಿದೆ. ಇಂದು 1,17,999 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿಂದು 1,030 ಮಂದಿಗೆ ಸೋಂಕು ತಗುಲಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 9, ಬಳ್ಳಾರಿ 28, ಬೆಳಗಾವಿ 52, ಬೆಂಗಳೂರು ಗ್ರಾಮಾಂತರ 50, ಬೆಂಗಳೂರು ನಗರ 1,030, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 45, ಚಿಕ್ಕಮಗಳೂರು 37, ಚಿತ್ರದುರ್ಗ 33, ದಕ್ಷಿಣ ಕನ್ನಡ 67, ದಾವಣಗೆರೆ 28, ಧಾರವಾಡ 16, ಗದಗ 3, ಹಾಸನ 60, ಹಾವೇರಿ 3, ಕಲಬುರಗಿ 27, ಕೊಡಗು 22, ಕೋಲಾರ 22, ಕೊಪ್ಪಳ 4, ಮಂಡ್ಯ 69, ಮೈಸೂರು 64, ರಾಯಚೂರು 22, ರಾಮನಗರ 14, ಶಿವಮೊಗ್ಗ 41, ತುಮಕೂರು 184, ಉಡುಪಿ 19, ಉತ್ತರ ಕನ್ನಡ 23, ವಿಜಯಪುರ 33 ಮತ್ತು ಯಾದಗಿರಿಯಲ್ಲಿ 6 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *