ನವದೆಹಲಿ: ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆ.
ಇಂದು ಮಂಡನೆಯಾದ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡು ಬ್ಯಾಂಕು ಮತ್ತು ವಿಮಾ ಕಂಪನಿಯಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪ್ರಕಟಿಸಿದ್ದಾರೆ.
Advertisement
Advertisement
2022ರ ಹಣಕಾಸು ವರ್ಷದ ಒಳಗಡೆ ಎಲ್ಐಸಿ, ಬಿಪಿಸಿಎಲ್, ಪವನ್ ಹನ್ಸ್ ಮತ್ತು ಏರ್ ಇಂಡಿಯಾದಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
Advertisement
ಒಟ್ಟು 1.75 ಲಕ್ಷ ಕೋಟಿ ರೂ. ಬಂಡವಾಳವನ್ನು ಹಿಂದಕ್ಕೆ ಪಡೆಯಲು 2022ರ ಹಣಕಾಸು ವರ್ಷದಲ್ಲಿ ಗುರಿಯನ್ನು ನಿಗದಿ ಮಾಡಲಾಗಿದೆ.
Advertisement
Our fiscal deficit which started at 3.5% during Feb 2020 has increased to 9.5% of GDP, so we have spent, we have spent and we have spent
At the same time, we have given a clear glide path for deficit management
– notes Finance Minister #Budget2021 #AatmanirbharBharatKaBudget pic.twitter.com/Cdhq7Zr5CP
— PIB India (@PIB_India) February 1, 2021
ಕಳೆದ ವರ್ಷದ ಬಜೆಟ್ನಲ್ಲಿ 2.11 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆದ ಮಾಡಲು ಗುರಿ ನಿಗದಿಯಾಗಿತ್ತು. ಆದರೆ ಕೋವಿಡ್ 19 ನಿಂದಾಗಿ ಈ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.
ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಅನುತ್ಪಾದಕಾ ಆಸ್ತಿಗಳು(ಎನ್ಪಿಎ) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಬಜೆಟ್ಗಳಲ್ಲಿ ಬ್ಯಾಂಕುಗಳ ವಿಲೀನದ ಬಗ್ಗೆ ಘೋಷಣೆಯಾಗಿತ್ತು.