Thursday, 20th February 2020

Recent News

ಚಲಿಸುತ್ತಿದ್ದ ರೈಲಿನಲ್ಲಿ ಸ್ಟಂಟ್ – ಯುವಕರ ಬಂಧನ

ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಸ್ಟಂಟ್ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಯುವಕರು ಸ್ಟಂಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಯುವಕರನ್ನು ಬಂಧಿಸಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುರುವಾರ ಚೆಂಬೂರ್ ನಿಂದ ವಡಾಲಾದಲ್ಲಿ ಚಲಿಸುವ ಮುಂಬೈನ ಲೋಕಲ್ ರೈಲಿನಲ್ಲಿ ಯುವಕನೊಬ್ಬ ಈ ಸ್ಟಂಟ್ ಮಾಡುತ್ತಿದ್ದು, ಮತ್ತೊಬ್ಬ ಯುವಕ ಅದನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸುತ್ತಿದ್ದನು. ವಿಡಿಯೋದಲ್ಲಿ ಯುವಕ ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಬಾಗಿಲಿನ ಬಳಿ ಜಂಪ್ ಮಾಡುತ್ತಿದ್ದಾರೆ. ಅಲ್ಲದೆ ಡೋರ್ ಬಳಿಯಿದ್ದ ಕಂಬಿಯನ್ನು ಹಿಡಿದುಕೊಂಡು ರೈಲಿನ ಹೊರಗೆ ಬರುತ್ತಿದ್ದ ವಸ್ತುಗಳನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು.

ಈ ವಿಡಿಯೋ ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಲ್ಲದೆ ಅವರು ಸ್ಟಂಟ್ ಮಾಡುತ್ತಿದ್ದ ಹಾಗೂ ವಿಡಿಯೋ ಸೆರೆ ಹಿಡಿಯುತ್ತಿದ್ದ ಯುವಕರನ್ನು ಬಂಧಿಸಿದ್ದಾರೆ. ಇಬ್ಬರನ್ನು ವಡಾಲಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಈ ಹಿಂದೆ ಅಂದರೆ ಜೂನ್ ತಿಂಗಳಿನಲ್ಲಿ ರೈಲಿನಲ್ಲಿ ಇಬ್ಬರು ಯುವಕರು ಸ್ಟಂಟ್ ಮಾಡಿದ್ದರು. ಈ ಸ್ಟಂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗಿದ್ದನ್ನು ನೋಡಿದ ಕುರ್ಲಾ ರೈಲ್ವೆ ಪೊಲೀಸರು ಯುವಕರನ್ನು ಬಂಧಿಸಿದ್ದರು.

Leave a Reply

Your email address will not be published. Required fields are marked *