Connect with us

Bengaluru City

ಪಾದಚಾರಿಗಳ ಮೇಲೆ ಹರಿದ ಕಾರು- ಇಬ್ಬರಿಗೆ ತೀವ್ರ ಗಾಯ

Published

on

ಬೆಂಗಳೂರು: ರಸ್ತೆ ಬದಿ ಹೋಗ್ತಿದ್ದವರ ಮೇಲೆ ಕಾರು ಹರಿದು ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಕೆಆರ್ ಪುರಂನ ಸರಸ್ವತಿಪುರಂನಲ್ಲಿ ಇದೇ ಜನವರಿ 8ರ ಸಂಜೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವೃದ್ಧೆ ಶೀಲಾ ಹಾಗೂ ಲತಾಪಾಂಡೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳು. ಎಂ-14 ಓ 5475 ಜೆನ್ ಮಾರುತಿ ಕಾರು ಗರುಡಾಚಾರ್ ಪಾಳ್ಯದ ಕಡೆಯಿಂದ ಹೋಗುತ್ತಿದ್ದ ಪಾದಚಾರಿಗಳಿಗೆ ಗುದ್ದಿದೆ. ಈ ಅಪಘಾತದಿಂದ ಪಾದಾಚಾರಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೇವಲ ನಾಲ್ಕು ಸೆಕೆಂಡ್ ಗಳಲ್ಲಿ ಮಾರುತಿ ಕಾರು ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಬೆಚ್ಚಿ ಬೀಳಿಸುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಾಳು ಮಹಿಳೆಯರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಕೆ.ಆರ್ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv