Connect with us

Crime

ಹಾಸನದಲ್ಲಿ ಮತ್ತಿಬ್ಬರ ಮೃತದೇಹ ಪತ್ತೆ- ಕೊಲೆ ಶಂಕೆ

Published

on

– ನಿನ್ನೆಯಷ್ಟೇ ಎರಡು ದೇಹಗಳು ಪತ್ತೆ
– ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಅಪರಾಧ ಪ್ರಕರಣಗಳು

ಹಾಸನ: ಇತ್ತೀಚೆಗೆ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚು ನಡೆಯುತ್ತಿದ್ದು, ಜನರ ಬಿಚ್ಚಿ ಬಿದ್ದಿದ್ದಾರೆ. ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಪದೇ ಪದೇ ಕೊಲೆ, ದರೋಡೆಯಂಥ ಪ್ರಕರಣಗಳು ಹೆಚ್ಚು ನಡೆಯುತ್ತಿವೆ.

ಹಾಸನದಲ್ಲಿ ಇಂದು ಕೂಡ ಎರಡು ಅಪರಿಚಿತ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ನಗರದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಬಾವಿಯಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಮತ್ತೊಂದು ಮೃತದೇಹ ಹಾಸನ ಎಪಿಎಂಸಿಯ ಈರುಳ್ಳಿ ಮಂಡಿಯಲ್ಲಿ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯ ಜನ ಭಯದಲ್ಲೇ ಬದುಕುವಂತಾಗಿದೆ. ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿಲ್ಲ.

ಗುರುವಾರ ಸಹ ಜಿಲ್ಲೆಯ ಅಗಿಲೆ ಸಮೀಪ ಕೊಲೆ ಮಾಡಿ ಬಿಸಾಕಿದ್ದ ಒಂದು ಮೃತದೇಹ ಮತ್ತು ಹೇಮಾವತಿ ಅಣೆಕಟ್ಟೆ ಹಿನ್ನೀರಿನಲ್ಲಿ ಒಂದು ಒಟ್ಟು ಎರಡು ಮೃತದೇಹ ಪತ್ತೆಯಾಗಿತ್ತು. ಇಂದು ಕೂಡ ಅನುಮಾನಾಸ್ಪದ ರೀತಿಯಲ್ಲಿ ಹಾಸನ ನಗರದಲ್ಲಿ ಎರಡು ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹಾಸನ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *