Bengaluru City

ರಾಜ್ಯದಲ್ಲಿಂದು 1,987 ಕೇಸ್, 37 ಸಾವು- ಪಾಸಿಟಿವಿಟಿ ರೇಟ್ ಶೇ.1.43ಕ್ಕೆ ಹೆಚ್ಚಳ

Published

on

Share this

ಬೆಂಗಳೂರು: ರಾಜ್ಯದಲ್ಲಿಂದು 1,987 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 37 ಜನ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ರೇಟ್ ಶೇ.1.43ಕ್ಕೆ ತಲುಪಿದೆ.

ಇಂದು 1,632 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 23,796 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಶೇ.1.86ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 29,05,124 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 36,562 ಜನರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಇದನ್ನೂ ಓದಿ: ಕೇರಳದಲ್ಲಿ ಕೊರೊನಾ ಹೆಚ್ಚಳ- ಕೊಡಗು ಗಡಿಗಳಲ್ಲಿ ಹೈಅಲರ್ಟ್

ಒಟ್ಟು 1,38,532 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 450 ಜನಕ್ಕೆ ಸೋಂಕು ತಗುಲಿದ್ದು, 11 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 8,529 ಸಕ್ರಿಯ ಪ್ರಕರಣಗಳಿವೆ. ಇಂದು 377 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 15, ಬೆಳಗಾವಿ 56, ಬೆಂಗಳೂರು ಗ್ರಾಮಾಂತರ 40, ಬೆಂಗಳೂರು ನಗರ 450, ಬೀದರ್ 0, ಚಾಮರಾಜನಗರ 23, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 55, ಚಿತ್ರದುರ್ಗ 26, ದಕ್ಷಿಣ ಕನ್ನಡ 365, ದಾವಣಗೆರೆ 14, ಧಾರವಾಡ 19, ಗದಗ 3, ಹಾಸನ 105, ಹಾವೇರಿ 3, ಕಲಬುರಗಿ 6, ಕೊಡಗು 132, ಕೋಲಾರ 51, ಕೊಪ್ಪಳ 7, ಮಂಡ್ಯ 47, ಮೈಸೂರು 177, ರಾಯಚೂರು 1, ರಾಮನಗರ 8, ಶಿವಮೊಗ್ಗ 40, ತುಮಕೂರು 108, ಉಡುಪಿ 148, ಉತ್ತರ ಕನ್ನಡ 75, ವಿಜಯಪುರ 4 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

Advertisement
Advertisement