ದೆಹಲಿಯ 23 ವರ್ಷದ ಸನಿ ಗರ್ಗ್ ತಮ್ಮ ಪದವಿ ಎರಡನೇ ವರ್ಷದಲ್ಲಿ ಆರಂಭಿಸಿದ ಸ್ಟಾರ್ಟ್ ಅಪ್ ಇಂದು 23 ಕೋಟಿ ಟರ್ನ್ ಓವರ್ ಹೊಂದಿದೆ. 2018ರಲ್ಲಿ 18 ವರ್ಷದ ಸನಿ ‘ಯೊವರ್ಸ್ ಶೆಲ್’ ಎಂಬ ಸ್ಟಾರ್ಟ್ ಅಪ್ ಆರಂಭಿಸಿದ ಕಂಪನಿಯ ಟರ್ನ್ ಓವರ್ 20 ಕೋಟಿಗೆ ತಲುಪಿದೆ. ಯುವರ್ ಶೆಲ್ ವಿದ್ಯಾರ್ಥಿಗಳಿಗೆ ಸೂಕ್ತ ಪಿಜಿ(ಪೇಯಿಂಗ್ ಗೆಸ್ಟ್)ಗಳ ಮಾಹಿತಿಯನ್ನ ನೀಡುತ್ತದೆ.
Advertisement
ಕೊರೊನಾಗೂ ಮುನ್ನ 2019 ನವೆಂಬರ್ ನಲ್ಲಿ ಇವರ ಸ್ಟಾರ್ಟ್ ಅಪ್ ವ್ಯವಹಾರವನ್ನ ಸ್ಟೌಂಜಾ ಲಿವಿಂಗ್ ದೊಡ್ಡ ಮೊತ್ತಕ್ಕೆ ಖರೀದಿಸಿತ್ತು. ಇದೇ ಹಣದಿಂದ ಲಾಕ್ಡೌನ್ ವೇಳೆ ಗೆಳತಿ ಶೆಫಾಲಿ ಜೈನ್ ಜೊತೆಯಲ್ಲಿ ‘ಎಇ ಸರ್ಕಲ್’ ಹೆಸರಿನ ಹೊಸ ಸ್ಟಾರ್ಟ್ ಅಪ್ ಆರಂಭಿಸಿದರು. ಇದರ ಮೂಲಕ ಹೊಸ ಸ್ಟಾರ್ಟ್ ಅಪ್ ಆರಂಭಿಸುವ ಉತ್ಸಾಹಿಗಳಿಗೆ ಮಾರ್ಗದರ್ಶನದ ಜೊತೆಯಲ್ಲಿ ಸಹಾಯ ಸಹ ನೀಡಲಾಗುತ್ತದೆ.
Advertisement
Advertisement
ಸ್ಟಾರ್ಟ್ ಅಪ್ ಆರಂಭವಾಗಿದ್ದೇಗೆ?: ಒಂದು ಸಮಸ್ಯೆಯನ್ನ ಗುರುತಿಸಿ ಪರಿಹಾರ ಒದಗಿಸೋದು ಸ್ಟಾರ್ಟ್ ಅಪ್. ನಾನು ಕಾಲೇಜಿನಲ್ಲಿ ಹಲವರ ಜೊತೆ ಮಾತನಾಡಿದಾಗ ಒಂದು ಕಾಮನ್ ಪ್ರಾಬ್ಲಂ ಎಲ್ಲರೂ ಹೇಳಿಕೊಂಡರು. ಅದು ಸರಿಯಾದ ಪಿಜಿ ಸಮಸ್ಯೆ. ದೆಹಲಿಗೆ ಓದಲು ಬರುವ ಹೆಚ್ಚಿನ ವಿದ್ಯಾರ್ಥಿಗಳು ಮೊದಲಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದ್ರೆ ಅಷ್ಟು ಸುಲಭವಾಗಿ ದೆಹಲಿಯಲ್ಲಿ ಉತ್ತಮ ಪಿಜಿ ಸಿಗೋದು ಸುಲಭದ ಮಾತಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಹೊರಟಾಗ ಸ್ಟಾರ್ಟ್ ಆಪ್ ಆರಂಭವಾಯ್ತು. ಕಾಲೇಜಿನ ಅಡ್ಮಿಶನ್ ಗೆ ಕೇವಲ 15 ದಿನ ಮಾತ್ರ ಇತ್ತು. ನನ್ನದೇ ಆ್ಯಪ್, ವೆಬ್ಸೈಟ್ ಸಿದ್ಧಪಡಿಸಲು ಮುಂದಾಗಿದ್ರೆ ಈ ಅವಕಾಶ ನನ್ನಿಂದ ತಪ್ಪುತ್ತಿತ್ತು ಎಂದು ಸನಿ ಹೇಳುತ್ತಾರೆ.
Advertisement
20 ದಿನದಲ್ಲಿ 7.5 ಲಕ್ಷ ಲಾಭ: ಈ ವೇಳೆ ಸನಿ ಗೆಳೆಯರ ಸಹಾಯ ಪಡೆದು ಕೆಲವರನ್ನ ಕೆಲಸಕ್ಕೆ ನೇಮಿಸಿಕೊಂಡು, ನಗರದ ಪಿಜಿ ಮಾಲೀಕರ ಜೊತೆ ಮಾತುಕತೆ ನಡೆಸಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯ್ತು. ಕಾಲೇಜಿನ ಅಡ್ಮಿಶನ್ ಆರಂಭವಾದಾಗ ಪೋಸ್ಟರ್ ಪ್ರಿಂಟ್ ಮಾಡಿ ಬರೋ ವಿದ್ಯಾರ್ಥಿಗಳಿಗೆ ವಿತರಿಸಲಾಯ್ತು. ಇದೇ ರೀತಿ ಸನಿ ತಮ್ಮ ಗೆಳೆಯರೊಂದಿಗೆ 15 ದಿನದಲ್ಲಿ ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ಪಿಜಿ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾದರು. ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಸನಿ ನಿರ್ದೇಶನದ ಮೇರೆಗೆ ಪಿಜಿಯಲ್ಲಿ ದಾಖಲಾದರು. ಅಂದು 20 ದಿನದಲ್ಲಿ ಸನಿ 7.5 ಲಕ್ಷಕ್ಕೂ ಅಧಿಕ ಲಾಭವನ್ನ ತಮ್ಮದಾಗಿಸಿಕೊಂಡು ಉದ್ಯಮದ ಮೊದಲ ಹೆಜ್ಜೆಯಲ್ಲಿಯೇ ಯಶಸ್ಸು ಕಂಡರು.
ಯುವರ್ಸ್ ಶೆಲ್ ಆರಂಭ: ಜುಲೈ 2017ರಲ್ಲಿ ಸನಿಗೆ ಪಿಜಿ ಪಡೆದ ವಿದ್ಯಾರ್ಥಿಗಳು ಕರೆ ಮಾಡಿ ನಿಂದಿಸಲಾರಂಭಿಸಿದರು. ನೀವು ಹೇಳಿದ ಪಿಜಿ ಚೆನ್ನಾಗಿಲ್ಲ. ಊಟ, ಮೂಲಸೌಲಭ್ಯ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಸನಿ ಹೇಳಿ ಮನಸ್ಸಿಗೆ ಬಂದಂತೆ ನಿಂದಿಸಿದ್ದರು. ಆಗ ಸನಿಗೆ ಪಿಜಿ ಹುಡುಕೋದು ಕಷ್ಟವಲ್ಲ, ಆದ್ರೆ ಇರೋದರಲ್ಲಿ ಬೆಸ್ಟ್ ಆಯ್ಕೆ ಮಾಡಿಕೊಳ್ಳುವ ವಿಚಾರ ಬಂದಿದೆ. ಈ ವೇಳೆ ಯುವರ್ ಶೆಲ್ ಆರಂಭಿಸುವ ಐಡಿಯಾ ಸನಿಗೆ ಬಂದಿದೆ. ಸ್ಟ್ಯಾಂಡಪ್ ಇಂಡಿಯಾ- ಸ್ಟಾರ್ಟ್ ಅಪ್ ಇಂಡಿಯಾ ಸ್ಕೀಂನಡಿ ಸನಿ 35 ಲಕ್ಷ ರೂ. ಸಾಲ ಪಡೆದುಕೊಂಡರು. ಹೊರಗಿನಿಂದ ಒಂದಿಷ್ಟು ಸಾಲ ಪಡೆದ ಸನಿ, 150 ಬೆಡ್ ಗಳ ಯುವರ್ಸ್ ಶೆಲ್ ಆರಂಭಿಸಿದರು. ಕೇವಲ 15 ದಿನಗಳಲ್ಲಿ ಎಲ್ಲ ಬೆಡ್ ಗಳು ಭರ್ತಿಯಾದವು.
ಯುವರ್ಸ್ ಶೆಲ್ ಆಗಿ ಲೀಸ್ ಮತ್ತು ಬಾಡಿಗೆಯಲ್ಲಿ ಫ್ಲ್ಯಾಟ್ ಪಡೆದಿದ್ದ ಸನಿ, ಪಿಜಿಗಾಗಿ ಕೋಣೆಯನ್ನ ವಿನ್ಯಾಸಗೊಳಿಸಿದ್ದರು. ಈ ಕೆಲಸಕ್ಕೆ ಸನಿಗೆ ಗೆಳೆಯರಾದ ಶೆಫಾಲಿ, ವಿಶೇಷ್ ಕುಂಗರ್ ಮತ್ತು ಗೌರವ್ ವರ್ಮಾ ಸಾಥ್ ನೀಡಿದ್ದರು. ಸ್ಟಾರ್ಟ್ ಅಪ್ ಆರಂಭವಾದ ಕೆಲ ದಿನಗಳಲ್ಲಿ ಸನಿ ಅವರಿಗೆ ಹೈದರಾಬಾದ್ ಐಐಎಂನಲ್ಲಿ ಪ್ರವೇಶಾತಿ ಸಿಕ್ಕಿತ್ತು. ಆದ್ರೆ ಬ್ಯುಸಿನೆಸ್ ನಿಂದಾಗಿ ಸನಿ ಹೈದರಾಬಾದ್ ಗೆ ಹೋಗದ ಕಾರಣ ಕುಟುಂಬಸ್ಥರ ಕೋಪಕ್ಕೆ ಗುರಿಯಾಗಿದ್ದರು.
2019 ನವೆಂಬರ್ ನಲ್ಲಿ ನಮ್ಮ ಬ್ಯುಸಿನೆಸ್ ಗಮನಿಸಿದ ಸ್ಟೈಂಜಾ ಲಿವಿಂಗ್ ನಮ್ಮ ಕಂಪನಿಯ ಖರೀದಿಗೆ ಮುಂದಾಯ್ತು. ಆ ವೇಳೆ ನಮ್ಮ ಬಳಿ ಯಾವುದೇ ಕೆಲಸ ಇರಲಿಲ್ಲ. ನಮ್ಮೆಲ್ಲರ ಮುಂದಿನ ಭವಿಷ್ಯಕ್ಕಾಗಿ ಯುವರ್ಸ್ ಶೆಲ್ ಮಾರಲಾಯ್ತು. ಮಾರಾಟ ವೇಳೆ ಕಂಪನಿಯ ಯಾವ ಸದಸ್ಯರು ಸಂತೋಷದಿಂದ ಇರಲಿಲ್ಲ. ಲಾಕ್ಡೌನ್ ಮುನ್ನ ಕಂಪನಿ ಪೂರ್ಣ ಪ್ರಮಾಣದಲ್ಲಿ ಸೇಲ್ ಆಗಿದ್ದರಿಂದ ದೊಡ್ಡ ಆರ್ಥಿಕ ಹೊಡೆತದಿಂದ ನಾವೆಲ್ಲರೂ ಬದುಕುಳಿದೆವು. ಇಲ್ಲವಾದಲ್ಲಿ 2020 ನಮಗೆ ದೊಡ್ಡ ಹೊಡೆತ ನೀಡುತ್ತಿತ್ತು ಎಂದು ಸನಿ ಹೇಳುತ್ತಾರೆ.
ಎನಿಥಿಂಗ್ ಆ್ಯಂಡ್ ಎವಿರಿಥಿಂಗ್: ಯುವರ್ ಶೆಲ್ ಮಾರಾಟದ ಬಳಿಕ ಸನಿ ಹೊಸ ಎಇ ಸರ್ಕಲ್ ಆರಂಭಿಸಿದ್ದಾರೆ. ಎಇ ಅಂದ್ರೆ ಎನಿಥಿಂಗ್ ಆ್ಯಂಡ್ ಎವಿರಿಥಿಂಗ್ ಎಂದರ್ಥ. ಇಲ್ಲಿ ಸನಿ ಮತ್ತು ಅವರ ತಂಡ ಆರ್ಥಿಕ, ಕಾನೂನುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತದೆ. ಇದರ ಜೊತೆ ಸನಿ ಮಾರ್ಕೆಟಿಂಗ್, ಪ್ರೊಡಕ್ಷನ್ ಮತ್ತು ಪ್ರಿಂಟಿಂಗ್ ಬ್ಯುಸಿನೆಸ್ ನಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ವರ್ಷಕ್ಕೆ 20 ಕೋಟಿಗೂ ಅಧಿಕ ಟರ್ನ್ ಓವರ್ ಹೊಂದಿದೆ.