Connect with us

ಜಿಲ್ಲೆಗಳಲ್ಲಿ ಕೊರೊನಾ ಅಬ್ಬರ – ಇಂದು 18,324 ಹೊಸ ಪ್ರಕರಣ, 514 ಸಾವು

ಜಿಲ್ಲೆಗಳಲ್ಲಿ ಕೊರೊನಾ ಅಬ್ಬರ – ಇಂದು 18,324 ಹೊಸ ಪ್ರಕರಣ, 514 ಸಾವು

– ಹಾಸನ 2,078, ಮೈಸೂರು 1,573, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ಜಿಲ್ಲೆಗಳಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಇಂದು 18,324 ಹೊಸ ಪ್ರಕರಣಗಳು ವರದಿಯಾಗಿವೆ. ಹಾಸನ 2,078, ಮೈಸೂರು 1,573, ತುಮಕೂರಿನಲ್ಲಿ 979 ಕೊರೊನಾ ಪ್ರಕರಣಗಳು ವರದಿಯಾಗಿವೆ.

ಇಂದು ಕೊರೊನಾಗೆ 514 ಸೋಂಕಿತರು ಸಾವನ್ನಪ್ಪಿದ್ದು, ಮರಣ ಪ್ರಮಾಣ ಶೇ.2.80ಕ್ಕೆ ಏರಿಕೆಯಾಗಿದೆ. ಇದುವರೆಗೂ ರಾಜ್ಯದಲ್ಲಿ 30,531 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಇವತ್ತು 24,036 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆದ್ರೆ, 2,86,798 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪಸರಿಸುವ ಪ್ರಮಾಣ ಶೇ.12.20ರಷ್ಟಿದೆ. ಇಂದು ಒಟ್ಟು 1,50168 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಇಂದು 3,533 ಜನರು ಸೋಂಕಿಗೆ ತುತ್ತಾದ್ರೆ, 347 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 1,34,384 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 194, ಬಳ್ಳಾರಿ 503, ಬೆಳಗಾವಿ 839, ಬೆಂಗಳೂರು ಗ್ರಾಮಾಂತರ 760, ಬೆಂಗಳೂರು ನಗರ 3,533, ಬೀದರ್ 27, ಚಾಮರಾಜನಗರ 313, ಚಿಕ್ಕಬಳ್ಳಾಪುರ 486, ಚಿಕ್ಕಮಗಳೂರು 742, ಚಿತ್ರದುರ್ಗ 379, ದಕ್ಷಿಣ ಕನ್ನಡ 598, ದಾವಣಗೆರೆ 559, ಧಾರವಾಡ 221, ಗದಗ 250, ಹಾಸನ 2,078, ಹಾವೇರಿ 146, ಕಲಬುರಗಿ 119, ಕೊಡಗು 310, ಕೋಲಾರ 217, ಕೊಪ್ಪಳ 237, ಮಂಡ್ಯ 623, ಮೈಸೂರು 1,573, ರಾಯಚೂರು 271, ರಾಮನಗರ 62, ಶಿವಮೊಗ್ಗ 767, ತುಮಕೂರು 979, ಉಡುಪಿ 580, ಉತ್ತರ ಕನ್ನಡ 588, ವಿಜಯಪುರ 192 ಮತ್ತು ಯಾದಗಿರಿಯಲ್ಲಿ 78 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Advertisement
Advertisement