Connect with us

Chikkamagaluru

17ರ ಹುಡುಗನನ್ನ ಮದ್ವೆಯಾದ 20ರ ಯುವತಿ

Published

on

Share this

ಚಿಕ್ಕಮಗಳೂರು: ಯುವತಿ ಅಪ್ರಾಪ್ತನನ್ನು ಮದುವೆಯಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಸಿಲೇಹಳ್ಳಿ ಗ್ರಾಮದ್ಲಲಿ ನಡೆದಿದೆ.

ಮೂಲತಃ ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಆಗ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಹುಡುಗನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಇಬ್ಬರ ಸ್ನೇಹ ಪ್ರೀತಿಗೆ ವೇದಿಕೆಯಾಗಿತ್ತು. ಹುಡುಗ ಕೂಡ ನನಗೆ 21 ವರ್ಷ ಎಂದು ಹೇಳಿಕೊಂಡಿದ್ದನು. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಇದನ್ನೂ ಓದಿ: ವರನಿಗೆ 2ರ ಮಗ್ಗಿ ಬರದಿದ್ದಕ್ಕೆ ಮದುವೆ ಕ್ಯಾನ್ಸಲ್

ಹುಡುಗಿ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಪೋಷಕರು ಮನೆಗೆ ಬರಬೇಡ ಎಂದಿದ್ದಾರೆ. ಆದರೆ ಹುಡುಗನಿಗೆ ಅಪ್ಪ ಇಲ್ಲ. ಅಮ್ಮ ಮಾತ್ರ ಇದ್ದಾರೆ. ಆಗ ಹುಡುಗನ ತಾಯಿ ಸಂಬಂಧಿಕರ ಜೊತೆ ಸೇರಿ ಬ್ರಹ್ಮಸಮುದ್ರ ಗ್ರಾಮದ ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಜೂನ್ 16ರಂದು ಮದುವೆ ಮಾಡಿದ್ದರು. ಇದನ್ನೂ ಓದಿ: ಪತ್ರಿಕೆ ಓದಲು ತಡವರಿಸಿದ ವರ – ಮದುವೆ ಮುರಿದುಕೊಂಡ ವಧು

ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಜೂನ್ 23 ರಂದು ಮಾಹಿತಿ ದೊರೆತಿದೆ. ಸಖರಾಯಪಟ್ಟಣ ಪೊಲೀಸರೊಡನೆ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಮತ್ತು ಬಿಸಿಲೇಹಳ್ಳಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ಇಂದ್ರಮ್ಮ ಸ್ಥಳಕ್ಕೆ ಭೇಟಿ ನೀಡಿ ಯುವತಿಯನ್ನ ವಶಕ್ಕೆ ಪಡೆದಿದ್ದಾರೆ. ಯುವತಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೊರೊನಾ ನಿಯಮ ಉಲ್ಲಂಘನೆ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ. ಸದ್ಯ ಯುವತಿಯನ್ನ ಜಿಲ್ಲೆಯ ಸಾಧ್ವಾರ ಕೇಂದ್ರದಲ್ಲಿ ಬಿಡಲಾಗಿದೆ. ಸಖರಾಯಪಟ್ಟಣ ಪೊಲೀಸರು ವಿಷಯವನ್ನ ಯುವತಿಯ ಪೋಷಕರ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ: ಔತಣ ಕೂಟದಲ್ಲಿ ಮಟನ್ ಊಟ ಇರಲಿಲ್ಲವೆಂದು ವಧು ಬದಲು ಬೇರೊಬ್ಬಳಿಗೆ ತಾಳಿ ಕಟ್ಟಿದ!

Click to comment

Leave a Reply

Your email address will not be published. Required fields are marked *

Advertisement