Connect with us

Districts

ಕುಡಿಯುವ ನೀರಿನಲ್ಲಿ ವಿಷ ಮಿಶ್ರಣ – ಅಸ್ವಸ್ಥರ ಸಂಖ್ಯೆ 17ಕ್ಕೆ ಏರಿಕೆ

Published

on

ಯಾದಗಿರಿ: ಕುಡಿಯುವ ನೀರಿನ ಟ್ಯಾಂಕಿನಲ್ಲಿ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ವಸ್ಥರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ಶಖಾಪುರ ಗ್ರಾಮದ ರೇವಣಸಿದ್ದಪ್ಪ ರಾಯಪ್ಪ(30), ಸಿದ್ದಪ್ಪ ತಿಪ್ಪಣ್ಣಾ ದೊರೆ(60) ಹಾಗೂ ಶಶಿಕುಮಾರ್ ಚಾಮಣ್ಣಾ(18) ಅಸ್ವಸ್ಥರಾಗಿದ್ದಾರೆ. ಅವರನ್ನು ಕೆಂಬಾವಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಶಖಾಪುರ ಗ್ರಾಮದ ವಿಷಕಾರಿ ನೀರು ಕುಡಿದಿದ್ದಕ್ಕೆ 14 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಅಸ್ವಸ್ಥರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಪಂಪ್ ಆಪರೇಟರ್ ಮೌನೇಶ್ ಪಂಪ್ ಆಪರೇಟರ್, ನಾಗಮ್ಮ, ರಾಯಮ್ಮ, ಅಶ್ವಿನಿ, ಮಲ್ಲಮ್ಮ ಗಂಡ ವಿರುಪಾಕ್ಷಿ, ಹಳ್ಳೆಮ್ಮ, ಈರಪ್ಪ, ಕಲ್ಲಮ್ಮ, ಲಕ್ಷ್ಮೀಬಾಯಿ, ಕಸ್ತೂರಿ ಬಾಯಿ, ಶಾಂತಮ್ಮ, ಬಸಮ್ಮ, ಅಯ್ಯಮ್ಮ, ಸುರೇಶ, ರೇವಣಸಿದ್ದಪ್ಪ, ಸಿದ್ದಪ್ಪ ದೋರೆ, ಶಶಿಕುಮಾರ್ ಅಸ್ವಸ್ಥರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಂಪ್ ಆಪರೇಟರ್ ಮೌನೇಶ್ ತಾಯಿ ಹೊನ್ನಮ್ಮ ಚಿಕಿತ್ಸೆ ಫಲಿಸದೇ ರಕ್ತ ವಾಂತಿ ಮಾಡಿಕೊಂಡು ಬುಧವಾರ ಮೃತಪಟ್ಟಿದ್ದರು. ಬುಧವಾರ ತಪಾಸಣೆಗೆಂದು ಕ್ರಿಮಿನಾಶಕ ಬೆರೆಸಿದ ಕುಡಿಯುವ ನೀರು ಕುಡಿದು ಹೊನ್ನಮ್ಮ ಅಸ್ವಸ್ಥಗೊಂಡಿದ್ದರು. ಅವರನ್ನು ಯಾದಗಿರಿಯ ಕೆಂಬಾವಿಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv