ಬೆಂಗಳೂರು: ಕೊರೊನಾ ಹೊಸ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದ್ದು, ಇಂದು 16,387 ಜನಕ್ಕೆ ಸೋಂಕು ತಗುಲಿದೆ. ಇಂದು ಕೊರೊನಾಗೆ 463 ಜನ ಸಾವನ್ನಪ್ಪಿದ್ದು, ಮೃತರ ಶೇಕಡಾವಾರು ಪ್ರಮಾಣ ಶೇ.2.82ರಷ್ಟಿದೆ.
Advertisement
ಇವತ್ತು 21,199 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 26,35,122 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸದ್ಯ 2,93,024 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ ಶೇ.11.22ರಷ್ಟು ಇದೆ. ಇಲ್ಲಿಯವರೆಗೆ 30,017 ಜನರು ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ 4,095 ಹೊಸ ಪ್ರಕರಣ ವರದಿಯಾಗಿದ್ದು, 307 ಜನ ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 1,38,870 ಸಕ್ರಿಯ ಪ್ರಕರಣಗಳಿದ್ದು, ಇವತ್ತು 8,620 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಟ್ಟು 1,45,923 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 262, ಬಳ್ಳಾರಿ 525, ಬೆಳಗಾವಿ 1,006, ಬೆಂಗಳೂರು ಗ್ರಾಮಾಂತರ 164, ಬೆಂಗಳೂರು ನಗರ 4,095, ಬೀದರ್ 23, ಚಾಮರಾಜನಗರ 258, ಚಿಕ್ಕಬಳ್ಳಾಪುರ 360, ಚಿಕ್ಕಮಗಳೂರು 214, ಚಿತ್ರದುರ್ಗ 483, ದಕ್ಷಿಣ ಕನ್ನಡ 618, ದಾವಣಗೆರೆ 535, ಧಾರವಾಡ 245, ಗದಗ 285, ಹಾಸನ 520, ಹಾವೇರಿ 79, ಕಲಬುರಗಿ 117, ಕೊಡಗು 298, ಕೋಲಾರ 389, ಕೊಪ್ಪಳ 295, ಮಂಡ್ಯ 711, ಮೈಸೂರು 1,687, ರಾಯಚೂರು 249, ರಾಮನಗರ 165, ಶಿವಮೊಗ್ಗ 548, ತುಮಕೂರು 882, ಉಡುಪಿ 636, ಉತ್ತರ ಕನ್ನಡ 456, ವಿಜಯಪುರ 166 ಮತ್ತು ಯಾದಗಿರಿಯಲ್ಲಿ 116 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.