Connect with us

Bengaluru City

ರಾಜ್ಯದಲ್ಲಿ ಕೊರೊನಾ ಇಳಿಮುಖ- ಇಂದು 1,565 ಪ್ರಕರಣ, 2,363 ಡಿಸ್ಚಾರ್ಜ್

Published

on

– ಎಂಟು ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿದ ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಇಂದು 1,565 ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾಗೆ ರಾಜ್ಯದಲ್ಲಿ 21 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ 8,61,647ಕ್ಕೆ ಏರಿಕೆಯಾಗಿದ್ದು, 27,146 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 11,529ಕ್ಕೆ ಏರಿಕೆ ಕಂಡಿದ್ದು, 746 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಸಂಖ್ಯೆ ಶೇ.1.57 ಮತ್ತು ಮರಣ ಪ್ರಮಾಣ ಶೇ.1.34ರಷ್ಟಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8, ಬಳ್ಳಾರಿ 20, ಬೆಳಗಾವಿ 47, ಬೆಂಗಳೂರು ಗ್ರಾಮಾಂತರ 14, ಬೆಂಗಳೂರು ನಗರ 840, ಬೀದರ್ 7, ಚಾಮರಾಜನಗರ 7, ಚಿಕ್ಕಬಳ್ಳಾಪುರ 32, ಚಿಕ್ಕಮಗಳೂರು 11, ಚಿತ್ರದುರ್ಗ 52, ದಕ್ಷಿಣ ಕನ್ನಡ 34, ದಾವಣಗೆರೆ 19, ಧಾರವಾಡ 16, ಗದಗ 5, ಹಾಸನ 26, ಹಾವೇರಿ 5, ಕಲಬುರಗಿ 31, ಕೊಡಗು 21, ಕೋಲಾರ 14, ಕೊಪ್ಪಳ 5, ಮಂಡ್ಯ 46, ಮೈಸೂರು 71, ರಾಯಚೂರು 27, ರಾಮನಗರ 17, ಶಿವಮೊಗ್ಗ 38, ತುಮಕೂರು 79, ಉಡುಪಿ 14, ಉತ್ತರ ಕನ್ನಡ 45, ವಿಜಯಪುರ 7 ಮತ್ತು ಯಾದಗಿರಿಯಲ್ಲಿ 7 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *