ಬೆಂಗಳೂರು: ರಾಜ್ಯದಲ್ಲಿ ಇಂದು 1,330 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇಂದು 886 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಕೊರೊನಾಗೆ 14 ಜನ ಮರಣ ಹೊಂದಿದ್ದು, ಸಾವನ್ನಪ್ಪಿದವರ ಸಂಖ್ಯೆ 11,792ಕ್ಕೇರಿಕೆಯಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ 8,86,227ಕ್ಕೆ ಏರಿಕೆಯಾಗಿದ್ದು, 23,709 ಸಕ್ರಿಯ ಪ್ರಕರಣಗಳಿವೆ. ಸದ್ಯ 336 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Advertisement
Advertisement
ಕೋವಿಡ್-19 ಸೋಂಕು ಖಚಿತ ಪ್ರಮಾಣ ಶೇ.1.40 ಮತ್ತು ಮರಣ ಪ್ರಮಾಣ ಶೇ.1.05ರಷ್ಟಿದೆ. ರಾಜಧಾನಿಯಲ್ಲಿಯೂ ಕೊಂಚ ಕೊರೊನಾ ಇಳಿಕೆಯಾಗಿದ್ದು, ಇಂದು 758 ಹೊಸ ಪ್ರಕರಣಗಳು ವರದಿಯಾಗಿವೆ. ಇವತ್ತು 94,885 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 11, ಬಳ್ಳಾರಿ 7, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 38, ಬೆಂಗಳೂರು ನಗರ 758, ಬೀದರ್ 1, ಚಾಮರಾಜನಗರ 10, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 19, ಚಿತ್ರದುರ್ಗ 33, ದಕ್ಷಿಣ ಕನ್ನಡ 36, ದಾವಣಗೆರೆ 14, ಧಾರವಾಡ 10, ಗದಗ 4, ಹಾಸನ 50, ಹಾವೇರಿ 9, ಕಲಬುರಗಿ 8, ಕೊಡಗು 9, ಕೋಲಾರ 25, ಕೊಪ್ಪಳ 8, ಮಂಡ್ಯ 40, ಮೈಸೂರು 51, ರಾಯಚೂರು 17, ರಾಮನಗರ 5, ಶಿವಮೊಗ್ಗ 12, ತುಮಕೂರು 49, ಉಡುಪಿ 14, ಉತ್ತರ ಕನ್ನಡ 31, ವಿಜಯಪುರ 12 ಮತ್ತು ಯಾದಗಿರಿಯಲ್ಲಿ 10 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.