Connect with us

Bengaluru City

ರಾಜ್ಯದಲ್ಲಿ 1,325 ಹೊಸ ಕೊರೊನಾ ಪ್ರಕರಣ – 12 ಸಾವು

Published

on

ಬೆಂಗಳೂರು: ರಾಜ್ಯದಲ್ಲಿಂದು 1,325 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 8,91,685ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾಗೆ 12 ಸೋಂಕಿತರು ಮೃತರಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 11,846ಕ್ಕೇರಿಕೆಯಾಗಿದೆ.

ಸದ್ಯ ರಾಜ್ಯದಲ್ಲಿ 24,959 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 278 ಸೋಂಕಿಯಯರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 1,400 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಖಚಿತ ಪ್ರಕರಣಗಳ ಪ್ರಮಾಣ ಶೇ.1.27 ಮತ್ತು ಮರಣ ಪ್ರಮಾಣ ಶೇ.0.90ರಷ್ಟಿದೆ.

ರಾಜ್ಯ ರಾಜಧಾನಿಯಲ್ಲಿ ಇವತ್ತು 709 ಹೊಸ ಪ್ರಕರಣ ವರದಿಯಾಗಿದ್ದು, 6 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 3,73,291ಕ್ಕೆ ಏರಿಕೆಯಾಗಿದ್ದು, 19,185 ಸಕ್ರಿಯ ಪ್ರಕರಣಗಳಿವೆ. ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ 4,176 ಜನರನ್ನ ಬಲಿ ಪಡೆದುಕೊಂಡಿದೆ. ಒಟ್ಟು 1,04,032 ಸ್ಯಾಂಪಲ್ ಗಳನ್ನ ಇಂದು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 12, ಬಳ್ಳಾರಿ 23, ಬೆಳಗಾವಿ 45, ಬೆಂಗಳೂರು ಗ್ರಾಮಾಂತರ 23, ಬೆಂಗಳೂರು ನಗರ 709, ಬೀದರ್ 4, ಚಾಮರಾಜನಗರ 13, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 42, ಚಿತ್ರದುರ್ಗ 8, ದಕ್ಷಿಣ ಕನ್ನಡ 37, ದಾವಣಗೆರೆ 9, ಧಾರವಾಡ 25, ಗದಗ 11, ಹಾಸನ 36, ಹಾವೇರಿ 1, ಕಲಬುರಗಿ 15, ಕೊಡಗು 18, ಕೋಲಾರ 22, ಕೊಪ್ಪಳ 3, ಮಂಡ್ಯ 24, ಮೈಸೂರು 55, ರಾಯಚೂರು 29, ರಾಮನಗರ 6, ಶಿವಮೊಗ್ಗ 17, ತುಮಕೂರು 44, ಉಡುಪಿ 14, ಉತ್ತರ ಕನ್ನಡ 30, ವಿಜಯಪುರ 9 ಮತ್ತು ಯಾದಗಿರಿಯಲ್ಲಿ 14 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

www.publictv.in