Connect with us

Crime

300 ಅಡಿ ಕಣಿವೆಗೆ ಉರುಳಿ ಬಿತ್ತು ಬಸ್- 13 ಸಾವು!

Published

on

ಜಮ್ಮು: ಚಾಲಕನ ನಿಯಂತ್ರಣ ತಪ್ಪಿ 300 ಅಡಿಯ ಕಣಿವೆಗೆ ಮಿನಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ 13 ಜನ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ 30 ಪ್ರಯಾಣಿಕರಿದ್ದ ಮಿನಿ ಬಸ್ಸು ಕಿಸ್ತ್ವಾರ್ ದಿಂದ ಕೆಶ್ವನ್ ಕಡೆಗೆ ಹೊರಟಿತ್ತು. ಈ ವೇಳೆ ಥಾಕ್ರೈ ಸಮೀಪ್ ದಾಂದರಬ್‍ಗೆ ಬರುತ್ತಿದ್ದಂತೆ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಬಸ್ಸು 300 ಅಡಿ ಆಳದ ಕಮರಿಗೆ ಬಿದ್ದಿದೆ. ಘಟನಾ ಸ್ಥಳದಲ್ಲಿಯೇ ಚೆನಾಬ್ ನದಿ ಹರಿಯುತ್ತಿದ್ದು, ಅದೃಷ್ಟವಶಾತ್ ನದಿಯ ದಂಡೆಯ ಮೇಲೆಯೇ ಬಸ್ ನಿಂತಿದೆ.

ಅಪಘಾತದಲ್ಲಿ 13 ಜನರು ಮೃತಪಟ್ಟರೆ, 13 ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯ ಆರಂಭಿಸಲಾಯಿತು ಎಂದು ಕಿಸ್ತ್ವಾರ್ ದ ಹಿರಿಯ ಅಧೀಕ್ಷಕ ರಾಜೇಂದ್ರ ಗುಪ್ತಾ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ 8 ಜನರನ್ನು ಪ್ರಪಾತದಿಂದ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಧನ ನೀಡುವುದಾಗಿ ಕಿಸ್ತ್ವಾರ್ ಉಪ ಕಮಿಷನರ್ ಅಂಗ್ರೆಜ್ ಸಿಂಗ್ ರಾಣಾ ಘೋಷಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv