Connect with us

Bengaluru City

1,280 ಹೊಸ ಕೊರೊನಾ ಪ್ರಕರಣ – 1,060 ಡಿಸ್ಚಾರ್ಜ್, 13 ಸಾವು

Published

on

– ರಾಜ್ಯದಲ್ಲಿ 25,015 ಸಕ್ರಿಯ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿಂದು 1,280 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 13 ಸೋಂಕಿತರು ಸಾವನ್ನಪ್ಪಿದ್ದಾರೆ. 1,060 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ರಾಜ್ಯದಲ್ಲಿ 25,015 ಸಕ್ರಿಯ ಪ್ರಕರಣಗಳಿದ್ದು, 275 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 8,95,284ಕ್ಕೆ ಏರಿಕೆಯಾಗಿದ್ದು, ಇದುವರೆಗೂ 11,880 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಸೋಂಕು ಖಚಿತ ಪ್ರಮಾಣ ಶೇ.1.44 ಮತ್ತು ಮರಣ ಪ್ರಮಾಣ ಶೇ.1.01 ರಷ್ಟಿದೆ.

ಬೆಂಗಳೂರಿನಲ್ಲಿ 638 ಹೊಸ ಪ್ರಕರಣಗಳು ವರದಿಯಾಗಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ 19,498 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಸಂಖ್ಯೆ 3,75,163ಕ್ಕೆ ಏರಿಕೆತಯಾಗಿದೆ. ಇವತ್ತು 88,698 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 22, ಬೆಳಗಾವಿ 28, ಬೆಂಗಳೂರು ಗ್ರಾಮಾಂತರ 16, ಬೆಂಗಳೂರು ನಗರ 638, ಬೀದರ್ 3, ಚಾಮರಾಜನಗರ 15, ಚಿಕ್ಕಬಳ್ಳಾಪುರ 50, ಚಿಕ್ಕಮಗಳೂರು 46, ಚಿತ್ರದುರ್ಗ 52, ದಕ್ಷಿಣ ಕನ್ನಡ 29, ದಾವಣಗೆರೆ 12, ಧಾರವಾಡ 11, ಗದಗ 7, ಹಾಸನ 49, ಹಾವೇರಿ 4, ಕಲಬುರಗಿ 24, ಕೊಡಗು 5, ಕೋಲಾರ 32, ಕೊಪ್ಪಳ 5, ಮಂಡ್ಯ 18, ಮೈಸೂರು 65, ರಾಯಚೂರು 25, ರಾಮನಗರ 6, ಶಿವಮೊಗ್ಗ 13, ತುಮಕೂರು 46, ಉಡುಪಿ 11, ಉತ್ತರ ಕನ್ನಡ 22, ವಿಜಯಪುರ 6 ಮತ್ತು ಯಾದಗಿರಿಯಲ್ಲಿ 16 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

www.publictv.in