Connect with us

Bengaluru City

ಹೊಸ ಕೊರೊನಾ ಪ್ರಕರಣ 1,279 – 3,218 ಡಿಸ್ಚಾರ್ಜ್

Published

on

ಬೆಂಗಳೂರು: ಇಂದು ರಾಜ್ಯದಲ್ಲಿ 1,279 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,96,563ಕ್ಕೆ ಏರಿಕೆಯಾಗಿದ್ದು, 23,056 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ 265 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ಕೊರೊನಾಗೆ ರಾಜ್ಯದಲ್ಲಿ 11,900 ಮಂದಿಗೆ ಸಾವನ್ನಪ್ಪಿದ್ದಾರೆ. ಇಂದು 3,218 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.26 ಮತ್ತು ಮರಣ ಪ್ರಮಾಣ ಶೇ.1.56ರಷ್ಟಿದೆ. ಇಂದು 1,01,058 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 9, ಬಳ್ಳಾರಿ 15, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 24, ಬೆಂಗಳೂರು ನಗರ 728, ಬೀದರ್ 2, ಚಾಮರಾಜನಗರ 12, ಚಿಕ್ಕಬಳ್ಳಾಪುರ 34, ಚಿಕ್ಕಮಗಳೂರು 12, ಚಿತ್ರದುರ್ಗ 41, ದಕ್ಷಿಣ ಕನ್ನಡ 34, ದಾವಣಗೆರೆ 6, ಧಾರವಾಡ 14, ಗದಗ 3, ಹಾಸನ 31, ಹಾವೇರಿ 12, ಕಲಬುರಗಿ 12, ಕೊಡಗು 8, ಕೋಲಾರ 16, ಕೊಪ್ಪಳ 9, ಮಂಡ್ಯ 40, ಮೈಸೂರು 71, ರಾಯಚೂರು 9, ರಾಮನಗರ 8, ಶಿವಮೊಗ್ಗ 33, ತುಮಕೂರು 33, ಉಡುಪಿ 15, ಉತ್ತರ ಕನ್ನಡ 15, ವಿಜಯಪುರ 10 ಮತ್ತು ಯಾದಗಿರಿಯಲ್ಲಿ 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

www.publictv.in