Connect with us

Bengaluru City

ರಾಜ್ಯದಲ್ಲಿಂದು 1,236 ಹೊಸ ಕೊರೊನಾ ಪ್ರಕರಣ – 1,497 ಡಿಸ್ಚಾರ್ಜ್

Published

on

ಬೆಂಗಳೂರು: ಇಂದು 1,236 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,05,901ಕ್ಕೆ ಏರಿಕೆಯಾಗಿದೆ. ಇಂದು 1,497 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ರಾಜ್ಯದಲ್ಲಿ 15,205 ಸಕ್ರಿಯ ಪ್ರಕರಣಗಳಿದ್ದು, 229 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾಗೆ 10 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 11,981ಲ್ಲೆ ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಪ್ರಮಾಣ ಶೇ.1.16 ಮತ್ತು ಮರಣ ಪ್ರಮಾಣ ಶೇ.0.80ರಷ್ಟಿದೆ. ಇಂದು 1,06,356 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 21, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 689, ಬೀದರ್ 3, ಚಾಮರಾಜನಗರ 14, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 8, ಚಿತ್ರದುರ್ಗ 27, ದಕ್ಷಿಣ ಕನ್ನಡ 40, ದಾವಣಗೆರೆ 16, ಧಾರವಾಡ 13, ಗದಗ 6, ಹಾಸನ 24, ಹಾವೇರಿ 7, ಕಲಬುರಗಿ 13, ಕೊಡಗು 17, ಕೋಲಾರ 29, ಕೊಪ್ಪಳ 12, ಮಂಡ್ಯ 31, ಮೈಸೂರು 54, ರಾಯಚೂರು 6, ರಾಮನಗರ 10, ಶಿವಮೊಗ್ಗ 32, ತುಮಕೂರು 57, ಉಡುಪಿ 12, ಉತ್ತರ ಕನ್ನಡ 14, ವಿಜಯಪುರ 14 ಮತ್ತು ಯಾದಗಿರಿಯಲ್ಲಿ 5 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

www.publictv.in