Connect with us

Bengaluru City

ರಾಜ್ಯದಲ್ಲಿ 1,203 ಹೊಸ ಕೊರೊನಾ ಪ್ರಕರಣ- 1,531 ಡಿಸ್ಚಾರ್ಜ್

Published

on

– 9 ಲಕ್ಷ ದಾಟಿದ ಒಟ್ಟು ಪ್ರಕರಣಗಳ ಸಂಖ್ಯೆ

ಬೆಂಗಳೂರು: ಇಂದು 1,203 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1,531 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 11 ಜನರನ್ನ ಕೊರೊನಾ ಮಹಾಮಾರಿ ಬಲಿ ಪಡೆದುಕೊಂಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,00,214ಕ್ಕೆ ಏರಿಕೆಯಾಗಿದ್ದು, ಈ ವರೆಗೆ 11,939 ಮಂದಿ ಸಾವನ್ನಪ್ಪಿದ್ದಾರೆ. 18,254 ಸಕ್ರಿಯ ಪ್ರಕರಣಗಳಿದ್ದು, 244 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.17 ಮತ್ತು ಮರಣ ಪ್ರಮಾಣ ಶೇ.0.91ರಷ್ಟಿದೆ. ಇಂದು 1,02,229 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವರೆಗೆ ಒಟ್ಟು 1,22,66,816 ಜನ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8, ಬಳ್ಳಾರಿ 23, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ 23, ಬೆಂಗಳೂರು ನಗರ 606, ಬೀದರ್ 16, ಚಾಮರಾಜನಗರ 20, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 12, ಚಿತ್ರದುರ್ಗ 51, ದಕ್ಷಿಣ ಕನ್ನಡ 53, ದಾವಣಗೆರೆ 13, ಧಾರವಾಡ 10, ಗದಗ 6, ಹಾಸನ 26, ಹಾವೇರಿ 7, ಕಲಬುರಗಿ 13, ಕೊಡಗು 19, ಕೋಲಾರ 10, ಕೊಪ್ಪಳ 12, ಮಂಡ್ಯ 25, ಮೈಸೂರು 59, ರಾಯಚೂರು 5, ರಾಮನಗರ 2, ಶಿವಮೊಗ್ಗ 18, ತುಮಕೂರು 30, ಉಡುಪಿ 21, ಉತ್ತರ ಕನ್ನಡ 20, ವಿಜಯಪುರ 18 ಮತ್ತು ಯಾದಗಿರಿಯಲ್ಲಿ 12 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

www.publictv.in