Connect with us

Bengaluru City

ಶಾಲಾ ಬಸ್‍ಗೆ ಮತ್ತೊಂದು ಬಸ್ ಡಿಕ್ಕಿ- 12 ವಿದ್ಯಾರ್ಥಿಗಳಿಗೆ ಗಾಯ, ಓರ್ವನ ಕಾಲು ಮುರಿತ

Published

on

ಬೆಂಗಳೂರು: ಶಾಲಾ ಬಸ್‍ಗೆ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬನ ಕಾಲು ಮುರಿದ ಘಟನೆ ಬೆಂಗಳೂರಿನ ಬಾಗಲೂರು ಸಂತೆ ಬಳಿ ನಡೆದಿದೆ.

ನಾಗಾರ್ಜುನ ಕಾಲೇಜ್ ಬಸ್‍ಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಲೇಜ್‍ನ 13 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದೆ. ಕುಡಿದ ಮತ್ತಿನಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ನ ಚಾಲಕ ಸ್ಕೂಲ್ ಬಸ್ ಚಲಾಯಿಸಿದ್ದೇ ಘಟನೆ ಕಾರಣ ಎಂದು ಹೇಳಲಾಗುತ್ತಿದೆ.

ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಮೊದಲಿಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ನಾಗಾರ್ಜುನ ಕಾಲೇಜ್ ಬಸ್‍ಗೆ ಡಿಕ್ಕಿ ಹೊಡೆದಿದೆ. ನಂತರ ಟ್ರಾನ್ಸ್‍ಫಾರ್ಮರ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ನಿತೀಶ್ ಎನ್ನುವ ವಿದ್ಯಾರ್ಥಿಯ ಕಾಲು ಮುರಿದಿದೆ ಹಾಗೂ ಸಂಜಯ್ ಎನ್ನುವ ವಿದ್ಯಾರ್ಥಿಗೆ ಆರು ಸ್ಟಿಚ್ ಹಾಕಲಾಗಿದೆ.

 

ಅಪಘಾತ ಮಾಡಿದ ನಂತರ ಡೆಲ್ಲಿ ಪಬ್ಲಿಕ್ ಸ್ಕೂಲ್ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv