Connect with us

ರಾಜ್ಯದಲ್ಲಿ 11,958 ಹೊಸ ಕೊರೊನಾ ಪ್ರಕರಣ – 340 ಸಾವು

ರಾಜ್ಯದಲ್ಲಿ 11,958 ಹೊಸ ಕೊರೊನಾ ಪ್ರಕರಣ – 340 ಸಾವು

ಬೆಂಗಳೂರು: ರಾಜ್ಯದಲ್ಲಿಂದು 11,958 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 340 ಜನ ಸಾವನ್ನಪ್ಪಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇಕಡಾವಾರು ಪ್ರಮಾಣ ಶೇ.9.08ಕ್ಕೆ ಇಳಿಕೆಯಾಗಿದೆ. ಜೊತೆಗೆ ಮರಣ ಪ್ರಮಾಣ ಸಹ ಶೇ.2.84ಕ್ಕಿ ಇಳಿಕೆಯಾಗಿದೆ.

ಇಂದು ಒಟ್ಟು 27,299 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 2,38,824 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೋವಿಡ್-19 ಸೋಂಕಿನಿಂದ 31,290 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವತ್ತಿನವರೆಗೆ ರಾಜ್ಯದಲ್ಲಿ 27,07,481 ಕೊರೊನಾ ಪ್ರಕರಣಗಳು ವರದಿಯಾಗಿವೆ.

ಇತ್ತ ರಾಜಧಾನಿಯಲ್ಲಿ ಎರಡು ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿಗರು ನಿಟ್ಟುಸಿರು ಬಿಡುತ್ತಿದ್ದಾರೆ. ಇಂದು 1,992 ಜನಕ್ಕೆ ಸೋಂಕು ತಗುಲಿದ್ದು, 199 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 1,07,645 ಸಕ್ರಿಯ ಪ್ರಕರಣಗಳಿವೆ.

ಇವತ್ತು ರಾಜ್ಯದಲ್ಲಿ ಒಟ್ಟು 1,31,553 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಐದು ಜಿಲ್ಲೆಗಳಲ್ಲಿ ಕೊರೊನಾ ಪ್ರಕಣಗಳ ಸಂಖ್ಯೆ ಒಂದಂಕಿಗೆ ಇಳಿದಿದೆ. ಬೆಂಗಳೂರು, ಹಾಸನ ಮತ್ತು ಮೈಸೂರಿನಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 112, ಬಳ್ಳಾರಿ ,267 ಬೆಳಗಾವಿ 355, ಬೆಂಗಳೂರು ಗ್ರಾಮಾಂತರ 292, ಬೆಂಗಳೂರು ನಗರ 1,992, ಬೀದರ್ 13, ಚಾಮರಾಜನಗರ 209, ಚಿಕ್ಕಬಳ್ಳಾಪುರ 282, ಚಿಕ್ಕಮಗಳೂರು 365, ಚಿತ್ರದುರ್ಗ 294, ದಕ್ಷಿಣ ಕನ್ನಡ 408, ದಾವಣಗೆರೆ 380, ಧಾರವಾಡ 313, ಗದಗ 141, ಹಾಸನ 1,108, ಹಾವೇರಿ 179, ಕಲಬುರಗಿ 67, ಕೊಡಗು 230, ಕೋಲಾರ 298, ಕೊಪ್ಪಳ 155, ಮಂಡ್ಯ 597, ಮೈಸೂರು 1,213, ರಾಯಚೂರು 64, ರಾಮನಗರ 48, ಶಿವಮೊಗ್ಗ 1,224, ತುಮಕೂರು 420, ಉಡುಪಿ 394, ಉತ್ತರ ಕನ್ನಡ 364, ವಿಜಯಪುರ 137 ಮತ್ತು ಯಾದಗಿರಿಯಲ್ಲಿ 37 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲೂ ಪಾಸಿಟಿವಿಟಿ ರೇಟ್ ಒಂದಂಕಿಗೆ ತಲುಪಿದೆ.  ಬೆಂಗಳೂರು ದಕ್ಷಿಣ 3.28%, ಬೆಂಗಳೂರು ಪೂರ್ವ -6.0%, ಬೆಂಗಳೂರು ಪಶ್ಚಿಮ -3.4%, ಯಲಹಂಕ – 4.8%, ಬೊಮ್ಮನಹಳ್ಳಿ – 6.2%, ದಾಸರಹಳ್ಳಿ – 3.9%, ಮಹಾದೇವಪುರ – 6.8% ಆರ್.ಆರ್ ನಗರ – 6.8% ವಲಯಗಳಲ್ಲಿ ಒಂದಂಕಿಗೆ ಬಂದು ನಿಂತಿದೆ.

Advertisement
Advertisement