Connect with us

Bengaluru City

10,704 ಪಾಸಿಟಿವ್‌, ಆಸ್ಪತ್ರೆಯಿಂದ 9,613 ಡಿಸ್ಚಾರ್ಜ್‌ – 101 ಬಲಿ

Published

on

ಬೆಂಗಳೂರು: ಇಂದು 10,704 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 9,613 ಮಂದಿ ಬಿಡುಗಡೆಯಾಗಿದ್ದಾರೆ. ಇಂದು 101 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 6,79,356ಕ್ಕೆ ಏರಿಕೆಯಾಗಿದೆ. ಈ ಪೈಕಿ 5,52,519 ಮಂದಿ ಬಿಡುಗಡೆಯಾಗಿದ್ದು 1,17,143 ಸಕ್ರಿಯ ಪ್ರಕರಣಗಳಿವೆ.

ಇಲ್ಲಿಯವರೆಗೆ ಒಟ್ಟು 9,675 ಮಂದಿ ಮೃತಪಟ್ಟಿದ್ದು ಸದ್ಯ 853 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

51,221 ಮಂದಿಗೆ ಆಂಟಿಜನ್‌ ಟೆಸ್ಟ್‌ ಮಾಡಿಸಿದ್ದು, 54,027 ಮಂದಿಗೆ ಆರ್‌ಟಿ ಪಿಸಿಆರ್‌ ಮತ್ತು ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,05,248 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 56,29,550 ಮಂದಿಗೆ ಕೋವಿಡ್‌ 19 ಪರೀಕ್ಷೆ ಮಾಡಲಾಗಿದೆ

ಬೆಂಗಳೂರು ನಗರದಲ್ಲಿ 5,121, ಮೈಸೂರು 642, ತುಮಕೂರು 509, ಹಾಸನದಲ್ಲಿ 441 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು 313, ಧಾರವಾಡ 93, ಬಳ್ಳಾರಿ 80, ಹಾಸನದಲ್ಲಿ 54 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *