Saturday, 20th July 2019

100 ವರ್ಷದ ವೃದ್ಧೆ ಮೇಲೆ 20ರ ಯುವಕನಿಂದ ಅತ್ಯಾಚಾರ!

ಕೋಲ್ಕತ್ತಾ: 100 ವರ್ಷದ ವೃದ್ಧೆಯ ಮೇಲೆ 20ರ ಯುವಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಗ್ರಾ ಬಿಸ್ವಾಸ್ ಅಲಿಯಾಸ್ ಅಭಿಜಿತ್ ಅತ್ಯಾಚಾರ ಎಸಗಿದ ಆರೋಪಿ. ನಾಡಿಯಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದ್ದು, ಅತ್ಯಾಚಾರದ ಬಳಿಕ ಯುವಕ ಅಲ್ಲಿಂದ ಕಾಲ್ಕಿತ್ತಿದ್ದ. ಈ ಕುರಿತು ಚಕ್ದಾ ಪೊಲೀಸ್ ಠಾಣೆಯಲ್ಲಿ ವೃದ್ಧೆಯ ಕುಟುಂಬಸ್ಥರು ಮಂಗಳವಾರ ಪ್ರಕರಣ ದಾಖಲಿಸಿದ್ದರು.

ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ತಲೆಮರೆಸಿಕೊಂಡಿದ್ದ ಅಭಿಜೀತ್‍ನನ್ನು ಗಂಗಪ್ರಸಾದ್‍ಪುರ್ ಪ್ರದೇಶದಲ್ಲಿ ಸಂತ್ರಸ್ತ ವೃದ್ಧೆಯ ಕುಟುಂಬಸ್ಥರು ಮಂಗಳವಾರ ಬಂಧಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣದ ಕುರಿತು ಆರೋಪಿ ಯುವಕನನ್ನು ವಿಚಾರಣೆ ಮಾಡಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ವರದಿಯಾಗಿದೆ.

ಸಂತ್ರಸ್ತ ವೃದ್ಧೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗಿತ್ತದೆ ಎಂದು ಚಕ್ದಾ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ರಾಜಸ್ಥಾನದ ಜೈಪುರ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಆಕೆಯ ಗುಪ್ತಾಂಗಕ್ಕೆ ರಾಡ್ ಹಾಕಿ ದುಷ್ಕರ್ಮಿಗಳು ಅಮಾನವೀಯತೆ ಮೆರೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *