ಸಂಚಾರಿ ವಿಜಯ್ ಇಲ್ಲ ಅನ್ನೋ ಬೇಸರದಲ್ಲೇ ನನ್ನ ಅವರ ನಡುವೆ ನಡೆದ ಒಂದು ಘಟನೆಯನ್ನು ಮೆಲುಕು ಹಾಕಲೇಬೇಕು. ಟೆಲಿಫೋನ್ ಮಾತುಕತೆಯಲ್ಲಿ ನಡೆದ ಪ್ರಸಂಗ ಇದು, 2017ರಲ್ಲಿ ವಿಜಯ್ ಸರ್ ನಮಸ್ಕಾರ ನಾನ್ ಹಾಲೇಶ್ ಅಂತ ಮಾತಾಡ್ತಿರೋದು ಬ್ಯುಸಿ ಇದ್ದೀರಾ ಎಂದು ಕೇಳಿದೆ.
Advertisement
ಇದಕ್ಕೆ,”ಇಷ್ಟೊತ್ತು ಬ್ಯುಸಿ ಇರಲಿಲ್ಲ. ನೀವ್ ಸರ್ ಅಂತ ಕರೆದಿದಕ್ಕೆ ನಾನ್ ಈಗ ಬ್ಯುಸಿ ಆಗ್ತೀನಿ ಸರ್” ಅಂದ್ರು. ಸಾರಿ..ಸಾರಿ.. ಸರ್, ಹೇಗಿದ್ದೀರಾ, ಅದು, ಇದು ಅಂತ ಒಂದಿಷ್ಟು ಸಮಯ ಹಾಳ್ ಮಾಡಿದ ನಂತ್ರ ನಾನ್ ಕಾಲ್ ಮಾಡಿದ ವಿಚಾರಕ್ಕೆ ಬಂದೆ. ಇದನ್ನೂ ಓದಿ: ಜನ್ರಿಗೆ ಒಳ್ಳೆದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್
Advertisement
Advertisement
ನಮ್ಮ ಊರು ಶಿವಮೊಗ್ಗದಲ್ಲಿ ಗೆಳೆಯರ ಜೊತೆ ಸೇರಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೀನಿ. ಈ ಕೆಲಸ ಒಂದಿಷ್ಟು ಮಕ್ಕಳಿಗೆ ನೆರವಾಗುದರಲ್ಲಿ ಡೌಟೇ ಇಲ್ಲ ಸರ್. ನೀವು ಈ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಂದ್ರೆ ತುಂಬ ಅನುಕೂಲವಾಗತ್ತೆ ಅಂತ ರಿಕ್ವೆಸ್ಟ್ ಮಾಡ್ಕೊಂಡೆ. ಒಂದ್ ಸೆಕೆಂಡ್ ಕೂಡ ಯೋಚ್ನೆ ಮಾಡದ ಸಂಚಾರಿ ವಿಜಯ್,”ಖಂಡಿತ ಬರ್ತೀನಿ ಯಾವಾಗ ಅಂತ ಡೇಟ್ ಹೇಳಿ ಸಾಕು” ಅಂದ್ರು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?
Advertisement
ಬರ್ತಿನಿ ಅನ್ನೋ ಮಾತು ಕೇಳಿ ತುಂಬ ಸಂತಸ ಆಯ್ತು, ಇನ್ನೊಂದು ಮುಖ್ಯವಾದ ವಿಚಾರ ಇದನ್ನ ಹೇಗೆ ಪ್ರಸ್ತಾಪ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ, ಸರ್ ಅಂದೆ”ನಮ್ಮಲ್ಲೆಲ್ಲ ಮುಚ್ಚುಮರೆ ಏನ್ ಹೇಳಿ” ಅಂದ್ರು.. ನಿಮ್ಮ ಪೇಮೆಂಟೂ… ಅಂತ ರಾಗ ಎಳಿತಿದ್ದೆ, “ಹಾ! ನನ್ನ ಪೇಮೆಂಟ್ ಮುಂದೆ ಹೇಳಿ ಅಂದ್ರು. ಅಲ್ಲ, ನನ್ನ ಹತ್ರಾ ನಿಮಿಗೆ ಕೊಡೋ ಅಷ್ಟು ದುಡ್ಡಿಲ್ಲ, ಹಾಗಂತ ಉಚಿತವಾಗಿ ನಿಮ್ಮನ್ನ ಕರೆಸೋದು ಉಚಿತವಲ್ಲ, ಅಂದೆ.”ಸರಿ ಎಷ್ಟು ಕೊಡ್ತೀರಾ ಹೇಳಿ” ಅಂತ ಗಟ್ಟಿ ಧ್ವನಿಯಲ್ಲಿ ಕೇಳಿದ್ರು. ಸ್ವಲ್ಪ ಭಯ, ಮುಜುಗರ ಶುರುವಾಯ್ತು ಹೇಗೆ ಹೇಳೋದು ಅಂತ. ಗಟ್ಟಿ ಮನಸ್ಸು ಮಾಡಿ, ನೀವು ತಪ್ಪಾಗಿ ತಿಳ್ಕೊಬಾದ್ರು ಸರ್, ಒಂದ್ ಹತ್ತು ಸಾವಿರ ಕೊಡ್ತೀನಿ ನೀವ್ ಬರೋದ್ರಿಂದ ಮಕ್ಕಳಿಗೆ ಖಂಡಿತ ಹೆಲ್ಪ್ ಆಗುತ್ತೆ ಅಂದೆ.. ಇದನ್ನೂ ಓದಿ: ಮತ್ತೆ ಹುಟ್ಟಿ ಬಾ ಗೆಳೆಯ ಎಂದ ಸ್ಯಾಂಡಲ್ವುಡ್
“ರೀ ಹಾಲೇಶ್, ಹತ್ತು ಸಾವಿರಕ್ಕೆ ನಾನ್ಯಾಕ್ ಬರ್ಲಿ ಹೋಗ್ರಿರಿ” ಅಂದ್ರು, ಸಡನ್ ಆಗಿ ಶಾಕ್ ಆಯ್ತು. ತಕ್ಷಣ,”ನೀವ್ ಊರಿಗೆ ಬಸ್ನಲ್ಲಿ ಹೋಗ್ತೀರಾ? ಅಥವಾ ಟ್ರೈನ್ನಲ್ಲಿ ಹೋಗೋದಾ?” ಎಂದು ಕೇಳಿದ್ರು. ಯಾವ್ದು ನಮ್ಮ ಸಮಯಕ್ಕೆ ಸರಿಯಾಗಿ ಸಿಗುತ್ತೋ ಅದರಲ್ಲಿ ಹೋಗೋದು ಸರ್ ಅಂತ ಸಪ್ಪೆ ಸಪ್ಪೆಯಾಗಿ ಉತ್ತರಿಸಿದೆ.
“ಸರಿ ಈಗ ನೀವು ಕಾರ್ಯಕ್ರಮಕ್ಕೆ ಊರಿಗೆ ಹೋಗ್ತಿರಲ್ಲ, ನಿಮ್ಮ ಜೊತೆ ನನಗೂ ಒಂದ್ ಟಿಕೆಟ್ ತಗೊಳ್ಳಿ” ಅಂದ್ರು. ಸಂಚಾರಿ ವಿಜಯ್ ಅವ್ರು ಈ ಮಾತನ್ನು ಹೇಳ್ತಿದ್ದಾರಾ ಅಂತ ಶಾಕ್ ಜೊತೆಗೆ ಸಂತಸ ಕೂಡ ಆಯ್ತು. ಸಂಚಾರಿ ವಿಜಯ್ ನಿಜ್ವಾಗ್ಲು ಬರ್ತಾರಾ ಅನ್ನೋ ಮನದ ಮೂಲೆಯಲ್ಲಿದ್ದ ಅನುಮಾನವೊಂದು ಸರ್ ನೀವ್ ಬಂದ್ರೆ ಖಂಡಿತ ಮಕ್ಕಳಿಗೆ ಅನುಕೂಲ ಆಗತ್ತೆ ಅಂತ ಮತ್ತೊಮ್ಮೆ ಹೊತ್ತಿ ಹೇಳ್ದೆ. ಇದನ್ನೂ ಓದಿ: ಲಾಕ್ಡೌನ್ ಮೊದಲು ಮಾತನಾಡಿದ್ದೆ, ಈಗ ಆಘಾತಗೊಂಡಿದ್ದೇನೆ: ಸುದೀಪ್
ನನ್ನ ಪರಿಸ್ಥಿತಿ ಅರ್ಥ ಮಾಡ್ಕೊಂಡ ಸಂಚಾರಿ ವಿಜಯ್, “ಖಂಡಿತ ಬರ್ತೀನಿ ಮಕ್ಕಳಿಗೆ ನೆರವಾಗುತ್ತೆ ಅನ್ನೋದಾದ್ರೆ ಡೋಂಟ್ವರಿ”ಅಂದ್ರು. “ಇನ್ನೊಂದು ಮಾತು ನನಗೆ ಕೊಡೋ ಹತ್ತು ಸಾವಿರವನ್ನು ನಿಮ್ಮ ಕಾರ್ಯಕ್ರಮಕ್ಕೆ ಬಳಸಿ ನಾನ್ ಖಂಡಿತ ಬರ್ತೀನಿ” ಅಂದ್ರು. ಇದನ್ನೂ ಓದಿ: ಕನ್ನಡಿಗರ ಮನಗೆದ್ದಿದ್ದ ನಟ- ಬೊಮ್ಮಾಯಿ ಕಂಬನಿ
ನ್ಯಾಷನಲ್ ಆವಾರ್ಡ್ ಅನ್ನೋ ದೊಡ್ಡ ಕಿರೀಟ ಹೊತ್ತಿದ್ದರೂ ಕೂಡ ಒಂದಿಷ್ಟು ಗರ್ವ ಇಲ್ಲದೆ, ನಿಮ್ಮ ಜೊತೆ ಬಸ್, ಟ್ರೈನ್ನಲ್ಲಿ ಬರ್ತೀನಿ ಅನ್ನೋ ಸರಳವಾದ ದೊಡ್ಡ ಗುಣ ಎಲ್ಲರಲ್ಲೂ ಜೀವಂತವಾಗಿರಲ್ಲ. ನಿಮ್ಮ ಒಳ್ಳೆ ಮನಸ್ಸು ಒಳ್ಳೆ ಕಾರ್ಯಗಳನ್ನು ಮತ್ತೆ ಮತ್ತೆ ಮೆಲುಕು ಹಾಕ್ತೀವಿ ಸರ್.. ಹೋಗ್ಬನ್ನಿ..