Wednesday, 21st August 2019

Recent News

ನ.10ರಂದು ಟಿಪ್ಪು ಜಯಂತಿ ಆಚರಣೆ- ಕಾರ್ಯಕ್ರಮಕ್ಕೆ ಮುಸ್ಲಿಂ ಧರ್ಮಗುರುವಿಗೆ ಆಹ್ವಾನ

ಬೆಂಗಳೂರು: ಭಾರೀ ವಿರೋಧದ ನಡುವೆಯೂ ಟಿಪ್ಪು ಜಯಂತಿ ಯಶಸ್ವಿಗೊಳಿಸಲು ಸಮ್ಮಿಶ್ರ ಸರ್ಕಾರ ಭರದಿಂದ ಸಿದ್ಧತೆ ನಡೆಸುತ್ತಿದೆ. ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಸ್ಲಿಂ ಧರ್ಮಗುರುವಿಗೆ ಸರ್ಕಾರದಿಂದ ಆಹ್ವಾನ ನೀಡಲಾಗುತ್ತಿದೆ.

ಕರ್ನಾಟಕ ಹಜರತ್ ಮೌಲಾನಾ ಸಘೀರ್ ಅಹಮದ್‍ನ ಮುಸ್ಲಿಂ ಗುರು ಆಮೀರ್ ಇ ಶಾರಿಯತ್ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ನವೆಂಬರ್ 10ರಂದು ಸಂಜೆ 6.30ಕ್ಕೆ ವಿಧಾನಸೌದದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದೆ. ಸಚಿವೆ ಜಯಮಾಲಾ, ಸಚಿವ ಜಮೀರ್ ಅಹಮದ್ ಅವರು ಸರ್ಕಾರದ ವತಿಯಿಂದ ಈ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸರ್ಕಾರದ ಸೂಚನೆ ಮೇರೆಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿನ್ನೆ ಚರ್ಚೆ ನಡೆಸಿತ್ತು. ಚರ್ಚೆ ಬಳಿಕ ಮಾತನಾಡಿದ ಸಚಿವೆ ಜಯಮಾಲಾ, ಸದ್ಯ ವಿರೋಧ ಪಕ್ಷದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಟಿಪ್ಪು ಜಯಂತಿ ಆಚರಣೆ ಮಾಡಿದ ಫೋಟೋಗಳು ಇದೆ. ಅವರೇ ಆಚರಣೆ ಮಾಡಿದ್ದ ಜಯಂತಿಗೆ ಅವರೇ ಏಕೆ ವಿರೋಧ ವ್ಯಕ್ತಪಡಿಸುತ್ತಾರೆ. ಸರ್ಕಾರದಲ್ಲಿ ಈ ಕುರಿತು ನಿಯಮ ಜಾರಿ ಮಾಡಲಾಗಿದೆ. ಅದ್ದರಿಂದ ಜಯಂತಿ ಆಚರಣೆ ನಡೆಯುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿರೋಧಿ ಚಟುವಟಿಕೆ ನಡೆಸಿದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಆದರೆ ಜನರ ರಕ್ಷಣೆ ಅವರ ಕರ್ತವ್ಯವೂ ಆಗಿದೆ. ಇದಕ್ಕೆ ಏನೇ ಆದರೂ ಅವರೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಟಿಪ್ಪು ಜಯಂತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಜಯಮಾಲಾ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *