CrimeLatestMain PostNational

ಹೊಸ ವರ್ಷ ಆಚರಣೆಗೆ ಶಿಮ್ಲಾ ಹೋಗಲು ದರೋಡೆ ಮಾಡಿ ಸಿಕ್ಕಿಬಿದ್ದ!

ನವದೆಹಲಿ: ಹೊಸ ವರ್ಷ ಆಚರಣೆಗೆಂದು ಶಿಮ್ಲಾಗೆ ಹೋಗುವ ಆಸೆಯಿಂದ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಆರೋಪಿಗಳನ್ನು ಫಯಾಜ್ ಅಹ್ಮದ್ ಸಿದ್ದಿಕಿ ಮತ್ತು ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದ್ದು, ಇವರು ಜಾಮಿಯಾ ನಗರದ ನಿವಾಸಿಗಳು. ಇವರಲ್ಲಿ ಫಯಾಜ್ ಹಾಲು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದು, ಸಾದಿಕ್ ಈತನ ಸಹೋದರನಾಗಿದ್ದಾನೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಹೊಸ ವರ್ಷವನ್ನು ಆಚರಿಸಲು ಶಿಮ್ಲಾಗೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿದ್ದರು. ಹೀಗಾಗಿ ಬುಧವಾರ ಮದರ್ ಡೈರಿಯ ಜಂತಾ ಫ್ಲಾಟ್ಸ್‍ನ ನೈಫ್ ಪಾಯಿಂಟ್ ಬಳಿ ವ್ಯಕ್ತಿಯೊಬ್ಬನನ್ನು ತಡೆದು 1.36 ಲಕ್ಷ ರೂ ದರೋಡೆ ಮಾಡಿದ್ದಾರೆ. ನಂತರ ಆರೋಪಿಗಳು ಅಲ್ಲಿದ್ದ ಜಸೋಲಾ ಕಡೆಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಮಾಡಿರುವುದಾಗಿ ಗುಲ್ಜಾರ್ ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಅದೇ ಸಮಯ ಸಿದ್ದಿಕಿ ಮತ್ತು ಆತನ ಸಹೋದರ ಒಟ್ಟಿಗೆ ಇರುವುದನ್ನು ನೋಡಿ ಪ್ರಶ್ನಿಸಿದಾಗ ಸಿದ್ದಿಕಿ ನಾನು ಮತ್ತು ನನ್ನ ತಮ್ಮ ಹಾಲು ಸರಬರಾಜು ಮಾಡಲು ಮದರ್ ಡೈರಿ ಬಳಿ ಬಂದಿರುವುದಾಗಿ ಹೇಳಿದ್ದಾನೆ. ನಂತರ ಘಟನೆ ಕುರಿತಂತೆ ಪೊಲೀಸರು ಫಯಾಜ್ ಮತ್ತು ಗುಲ್ಜಾರ್‍ನನ್ನು ಪ್ರತ್ಯೇಕವಾಗಿ ಕರೆಸಿ ವಿಚಾರಣೆ ನಡೆಸಿದ್ದಾರೆ.

ಗುಲ್ಜಾರ್ ವಿಚಾರಿಸಿದಾಗ ನಾನು ಜಸೋಲಾ ಬಳಿ ಕಾಡಿನಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದೆ. ನಂತರ ನೈಫ್ ಪಾಯಿಂಟ್ ಬಳಿ ಬರುವ ಹಾದಿಯಲ್ಲಿ ಒಂದೇ ಸಲ ಮೋಟಾರ್ ಸೈಕಲ್ ಮತ್ತು ಸ್ಕೂಟರ್‍ಗಳಲ್ಲಿ ಬಂದ ನಾಲ್ಕು ಜನರು ತನ್ನ ಬಳಿ ಇದ್ದ 1.36 ಲಕ್ಷ ರೂ. ಮತ್ತು ಮೊಬೈಲ್ ಫೋನ್‍ನನ್ನು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಫಯಾಜ್ ಸಹೋದರನ ವಿಚಾರಣೆ ನಡೆಸುತ್ತಿದ್ದ ವೇಳೆ, ಆತನ ಮೊಬೈಲ್‍ಗೆ ಬಿಡದಂತೆ ‘ಎಸ್’ ಎಂಬ ಅಕ್ಷರದಿಂದ ಆರಂಭವಾಗುವ ಹೆಸರಿನಿಂದ ನಿರಂತರವಾಗಿ ಕರೆಗಳು ಬರುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ಕಾಲ್ ಲಿಸ್ಟ್ ವಿಶ್ಲೇಷಿಸಿದಾಗ ಫಯಾಜ್ ಸಿದ್ದಿಕಿ ಜೊತೆ ಸಂಪರ್ಕದಲ್ಲಿರುವುದು ಕಂಡುಬಂದಿದೆ. ವಿಚಾರಣೆ ವೇಳೆ ಇಬ್ಬರು ಸ್ಥಳದಲ್ಲಿಯೇ ಇದ್ದರೂ ಕರೆ ಮಾಡಿರುವುದು ಪೊಲೀಸರಿ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಪೊಲೀಸ್(ಆಗ್ನೇಯ) ಆರ್.ಪಿ ಮೀನಾ ಹೇಳಿದರು.

ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಹೊಸ ವರ್ಷದ ಅಂಗವಾಗಿ ತಾನು ತನ್ನ ಸ್ನೇಹಿತರು ಶಿಮ್ಲಾಕ್ಕೆ ಹೋಗಲು ಯೋಜಿಸಿದ್ದೆವು. ಆದ್ರೆ ಪ್ರವಾಸಕ್ಕೆ ಹೋಗಲು ನಮ್ಮ ಬಳಿ ಹಣವಿರಲಿಲ್ಲ. ಹಾಗಾಗಿ ಸಾದಿಕ್ ಜೊತೆ ಸೇರಿ ಹಣ ದರೋಡೆ ಮಾಡಿದೆವು ಎಂದು ಫಯಾಜ್ ಒಪ್ಪಿಕೊಂಡಿದ್ದಾನೆ. ಇನ್ನೂ ಅವರ ಜೊತೆ ಕೆಲಸ ಮಾಡುತ್ತಿದ್ದ ನೌಶಾದ್ ಎಂಬಾತನಿಗೆ ಕೂಡ ಕರೆ ದರೋಡೆ ಮಾಡಿರುವುದಾಗಿ ತಿಳಿಸಿದ್ದಾನೆ. ಸದ್ಯ ಸಾದಿಕ್‍ನನ್ನು ಬಂಧಿಸಲಾಗಿದ್ದು ಆತನ ಬಳಿ ಇದ್ದ 65,000 ರೂ ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

Leave a Reply

Your email address will not be published.

Back to top button