ಬೆಂಗಳೂರು: ಚೀನಿ ವೈರಸ್ ನಿಂದಾಗಿ ಅರ್ಧಕ್ಕೆ ಮೊಟಕುಗೊಂಡ ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಇದೀಗ ಮತ್ತೆ ಆರಂಭವಾಗುತ್ತಿದೆ. ನಾಳೆಯಿಂದ ಬಿಗ್ ಬಾಸ್ ಆರಂಭವಾಗುತ್ತಿದ್ದು, ಸ್ಪರ್ಧಿಗಳು ಈಗಾಗಲೇ ಪ್ರೇಕ್ಷರಿಗೆ ಮನರಂಜನೆ ನೀಡಲು ರೆಡಿಯಾಗಿದ್ದಾರೆ. ಇತ್ತ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಕೂಡ ಹೊಸತನದೊಂದಿಗೆ ಸಿದ್ಧರಾಗಿದ್ದಾರೆ.
Advertisement
ಹೌದು. ನಾಳೆಯಿಂದ ಬಿಗ್ ಬಾಸ್ ಆರಂಭವಾಗುತ್ತಿರುವುದಾಗಿ ಈಗಾಗಲೇ ವಾಹಿನಿ ದೃಢಪಡಿಸಿದೆ. ಅಲ್ಲದೆ ಸ್ಪರ್ಧಿಗಳು ರೆಡಿಯಾಗುತ್ತಿರುವ ಪ್ರೋಮೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದೆ. ಇದೀಗ ಈ ಸಂಬಂಧ ಕಿಚ್ಚ ಸುದೀಪ್ ಕೂಡ ತಮ್ಮ ಫೋಟೋದೊಂದಿಗೆ ಬರೆದುಕೊಂಡು ಬಿಗ್ ಬಾಸ್ ಗೆ ಸನ್ನದ್ಧವಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 50 ದಿನ ನಡೆಯಲಿದೆ ಬಿಗ್ಬಾಸ್ ಸೆಕೆಂಡ್ ಇನ್ನಿಂಗ್ಸ್
Advertisement
View this post on Instagram
ಕಿಚ್ಚ ಹೇಳಿದ್ದೇನು..?
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಲ್ಪ ವಿರಾಮ ಬಿದ್ದಿತ್ತು. ಇದರಿಂದ ಸ್ಪರ್ಧಿಗಳಿಗೆ ಬ್ರೇಕ್ ಸಿಕ್ತು. ಹೀಗಾಗಿ ಈಗಾಗಲೇ ಸ್ಪರ್ಧಿಗಳು ವಿರಾಮ ತೆಗೆದುಕೊಳ್ಳಲು ಹೊರ ಹೊರಗಿದ್ದಾರೆ. ಈ ಮೂಲಕ ಅವರ ಸ್ಥಾನ ಮತ್ತು ಜನಪ್ರಿಯತೆಯನ್ನು ತಿಳಿದಿದ್ದಾರೆ. ಅಲ್ಲದೆ ಕೆಲ ಕಂತುಗಳನ್ನು ನೋಡಿದ್ದಾರೆ. ಹೀಗಾಗಿ ಪ್ರತಿ ಸ್ಪರ್ಧಿಗಳು ಏನೇನು ಮಾತನಾಡಿದ್ದಾರೆಂದು ತಿಳಿದಿದೆ. ಈಗ “ಮರು-ಪ್ರವೇಶ”. ಇದು ಹೊಸದು ಮತ್ತು ಇದು ಮಜವಾಗಿದೆ ಎಂದು ಸುದೀಪ್ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್- ಸ್ಪರ್ಧಿಗಳ ಎಂಟ್ರಿ ಹೇಗಿರಲಿದೆ?
Advertisement
Advertisement
ಒಟ್ಟಿನಲ್ಲಿ ನಾಳೆಯಿಂದ ಬಿಗ್ ಬಾಸ್ ವೀಕ್ಷಕರಿಗೆ ಮತ್ತೆ ಮಜನರಂಜನೆ ನೀಡಲು ಸ್ಪರ್ಧಿಗಳು ಸಜ್ಜಾಗಿದ್ದು, ಈ ಬಾರಿ ಅತೀ ಹೆಚ್ಚಿನ ಮಜಾ ಸಿಗಲಿದೆ ಎಂದು ಸುದೀಪ್ ಹೇಳಿದ್ದಾರೆ. ಹೀಗಾಗಿ ವೀಕ್ಷಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿದೆ.