– ಹೈಟೆನ್ಷನ್ ವೈರ್ ಇರೋದು ಫೈಟರ್ ಮಾಸ್ಟರ್ಗೆ ಗೊತ್ತಿರಬೇಕಿತ್ತು
ಬೆಂಗಳೂರು: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು. ಸಾಹಸ ದೃಶ್ಯಗಳ ಚಿತ್ರೀಕರಣ ಮಾಡುವಾಗ ಫೈಟ್ ಮಾಸ್ಟರ್ ವಿನೋದ್ ಗಮನಿಸಬೇಕಿತ್ತು. ಈ ಮೊದಲು ಅಲ್ಲಿ ಹೈಟೆನ್ಷನ್ ವೈರ್ ಇದ್ದಿದ್ದರಿಂದ ನಾನು ಆ ದೃಶ್ಯ ಮಾಡಲ್ಲ ಅಂತ ಹೇಳಿದ್ದೆ ಎಂದು ಲವ್ ಯು ರಚ್ಚು ಸಿನಿಮಾದ ನಾಯಕ ನಟ ಅಜಯ್ ರಾವ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಜಯ್ ರಾವ್, ಅಲ್ಲಿ ನನ್ನ ಸೀನ್ ಇರದ ಕಾರಣ ದೂರದಲ್ಲಿ ಕುಳಿತಿದ್ದೆ. ಇದ್ದಕ್ಕಿದ್ದಂತೆ ಶಾರ್ಟ್ ಸಕ್ರ್ಯೂಟ್ ರೀತಿಯಲ್ಲಿ ಸೌಂಡ್ ಕೇಳಿಸಿದಾಗ, ನನ್ನ ಹುಡುಗರು ಬಂದು ವಿಷಯ ಹೇಳಿದರು. ಕಳೆದ ಐದು ದಿನಗಳಿಂದ ಈಗಲ್ ಟನ್ ಬಳಿಯಲ್ಲಿ ಸಾಹಸ ಚಿತ್ರೀಕರಣ ನಡೆಯುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ಚಿತ್ರೀಕರಣ ನಡೆಸೋದು ಕಷ್ಟದ ಕೆಲಸ. ನಮ್ಮ ಟೀಂ ನಿರ್ಮಿಸಿದ ವಾಟರ್ ಟ್ಯಾಂಕ್ ಬಳಿ ಫೈಟ್ ಸೀನ್ ಇತ್ತು. ಆದ್ರೆ ನಾನು ಬೇಡ ಅಂತ ಹೇಳಿದ್ದಕ್ಕೆ ಅಜಯ್ ಎಲ್ಲದಕ್ಕೂ ಹಿಂದೇಟು ಹಾಕ್ತಾರೆ ಅನ್ನೋ ಮಾತುಗಳು ಕೇಳಿ ಬಂದವು ಎಂದು ಬೇಸರದ ಮಾತುಗಳನ್ನಾಡಿದರು.
Advertisement
Advertisement
ಒಬ್ಬ ಹುಡುಗ ಹೈಟೆನ್ಷನ್ ವೈರ್ ಬಳಿಯಲ್ಲಿದ್ದನಾ ಅಥವಾ ರೂಪ್ ಎಳೆಯುತ್ತಿದ್ದನಾ ಅಂತ ಸ್ಪಷ್ಟವಾಗಿ ಗೊತ್ತಿಲ್ಲ. ಮತ್ತೋರ್ವ ಹುಡುಗ ಬಿದ್ದು ಗಾಯಗೊಂಡಿದ್ದು ಮಾತ್ರ ಕಾಣಿಸಿತು. ಸದ್ಯ ಆ ಹುಡುಗ ಹುಷಾರಾಗಿದ್ದಾನೆ. ಅಷ್ಟರಲ್ಲಿ ಫೈಟರ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈಗಲೂ ಕೂಡ ನನ್ನ ಕೈಕಾಲು ನಡಗುತ್ತಿದೆ. ಇದಾದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಫೈಟ್ ಮಾಸ್ಟರ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನನ್ನಿಂದ ಏನಾದ್ರೂ ಸಹಾಯ ಬೇಕಾದ್ರೆ ಬರುತ್ತೇನೆ ಎಂದು ಹೇಳಿ ಮನೆಗೆ ಬಂದಿದ್ದೇನೆ ಎಂದು ತಿಳಿಸಿದರು.
Advertisement
ಏನಿದು ಘಟನೆ?:
ಬಿಡದಿಯ ಈಗಲ್ಟನ್ ರೆಸಾರ್ಟ್ ಬಳಿಯಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಣವಿದೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಹೈಟೆನ್ಷನ್ ವೈರ್ ತಗುಲಿ 35 ವರ್ಷದ ವಿವೇಕ್ ಎಂಬವವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವುhttps://t.co/Q5Gfy3XdWC#LoveYouRachchu #Sandalwood #KannadaNews #Shooting #Fighter
— PublicTV (@publictvnews) August 9, 2021