ಹಾವೇರಿ: ಕೊರೊನಾ ಅರ್ಭಟದಿಂದ ಅನ್ನದಾತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇವಂತಿಗೆ ಹೂವು ಮಾರಾಟವಾಗದೆ ಹಾಗೆ ಉಳಿದಿದ್ದರಿಂದ ರೈತರು ಟ್ರ್ಯಾಕ್ಟರ್
Advertisement
ಗ್ರಾಮದ ರೈತ ಚಂದ್ರಪ್ಪ ಅವರು ಒಂದು ಎಕರೆ ಜಮೀನಿನಲ್ಲಿ ಸೇವಂತಿಗೆ ಹೂವನ್ನು ಬೆಳೆದಿದ್ದರು. ಲಾಕ್ಡೌನ್ ನಿಂದ ಹೂವು ಮಾರಾಟವಾಗದೆ ಜಮೀನಿನಲ್ಲಿ ಹಾಗೆ ಉಳಿದಿದ್ದಕ್ಕೆ ಬೇಸತ್ತ ರೈತ ಇವತ್ತು ಬೆಳೆ ನಾಶ ಮಾಡಿದ್ದಾರೆ. ಇಪ್ಪತ್ತೈದು ಸಾವಿರ ರುಪಾಯಿಗಿಂತಲೂ ಅಧಿಕ ಹಣವನ್ನು ಖರ್ಚು ಮಾಡಿ ಸೇವಂತಿಗೆ ಹೂವನ್ನು ಬೆಳೆದಿದ್ದರು.
Advertisement
Advertisement
ಮಾರುಕಟ್ಟೆಯಲ್ಲಿ ಖರೀದಿ ಮಾಡುವ ವ್ಯಾಪಾರಸ್ಥರು ಕಡಿಮೆ ಬೆಲೆ ಕೇಳುತ್ತಿದ್ದಾರೆ. ಅದನ್ನ ಬೆಳೆದ ಹಾಗೂ ಖರ್ಚು ಮಾಡಿದ ಹಣವೂ ಬರುವುದಿಲ್ಲ. ಹೀಗಾಗಿ ಟ್ಯಾಕ್ಟರ್ ನಿಂದ ನಾಶ ಮಾಡಿದ್ದೇನೆ ಎಂದು ರೈತ ಹೇಳುತ್ತಾ ಕಣ್ಣಿರು ಹಾಕಿದ್ದಾರೆ.
Advertisement