ಹುಬ್ಬಳ್ಳಿ: ಲಾಕ್ ಡೌನ್ ವೇಳೆ ಹುಬ್ಬಳ್ಳಿಯಿಂದ ವಿವಿಧ ಮಹಾನಗರಗಳಿಗೆ ಸಂಪರ್ಕಿಸುವ ವಿಮಾನಯಾನ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಇಂಡಿಗೋ ಸಂಸ್ಥೆ ಜುಲೈ 1 ರಿಂದ ಮತ್ತೆ ವಿಮಾನಯಾನ ಸೇವೆ ಪುನರಾರಂಭ ಮಾಡುವುದಾಗಿ ತಿಳಿಸಿದೆ.
ಹುಬ್ಬಳ್ಳಿಯಿಂದ ಮುಂಬೈ, ಚೆನೈ, ಬೆಂಗಳೂರು, ಕಣ್ಣೂರು, ಕೊಚ್ಚಿ ಮಹಾನಗರಗಳಿಗೆ ವಿಮಾನಯಾನ ಸಂಪರ್ಕ ಸೇವೆ ಮತ್ತೆ ಆರಂಭಗೊಳ್ಳಲಿದೆ. ಜುಲೈ 9 ರಿಂದ ಹುಬ್ಬಳ್ಳಿ- ಹೈದ್ರಾಬಾದ್ ಅಲಯನ್ಸ್ ಏರ್ ವಿಮಾನ ಸೇವೆ ಆರಂಭವಾಗಲಿದೆ. ಅಗಸ್ಟ್ 2 ರಿಂದ ಹುಬ್ಬಳ್ಳಿ – ಅಹಮದಾಬಾದ್ ಇಂಡಿಗೋ ವಿಮಾನ ಸೇವೆ ಶುರುವಾಗಲಿದೆ.
Advertisement
Advertisement
ಈ ಸೇವೆ ಪುನರಾಂಭಿಸಿದ ಇಂಡಿಗೋ ಹಾಗೂ ಅಲಯೆನ್ಸ್ ಏರ್ ಸಂಸ್ಥೆಗಳಿಗೆ ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ವಿಮಾನಯಾನ ಸೇವೆಯನ್ನ ಜನರು ಸದುಪಯೋಗಪಡಿಸಿಕೊಳ್ಳುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಯುವತಿಯ ವರಿಸಲು ಗಡಿ ದಾಟಿದ ಭಾರತೀಯ ಯುವಕ- ಇಬ್ಬರೂ ಅರೆಸ್ಟ್
Advertisement