– ದೆಹಲಿಯ ಕ್ರಮ ಬೆಂಗಳೂರಿನಲ್ಲೂ ಬರುತ್ತಾ?
ನವದೆಹಲಿ: ನಾಲ್ಕನೇ ಹಂತದ ಅಲ್‍ಲಾಕ್‍ನಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿದ್ದು, ಸೆಪ್ಟೆಂಬರ್ 7 ರಿಂದ ಕಾರ್ಯಚರಣೆ ಆರಂಭವಾಗಲಿದೆ. ಕೊರೊನಾ ಸಂಕಷ್ಟದ ನಡುವೆ ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಈ ಹಿನ್ನೆಲೆ ದೆಹಲಿ ಮೆಟ್ರೋ ಸಂಚಾರ ನಿಗಮ ಮಂಡಳಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದು, ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ಪ್ರಕಾರ ಮೆಟ್ರೋ ಸಂಚಾರಕ್ಕೆ ಸ್ಮಾರ್ಟ್ ಕಾರ್ಡ್, ಹಾಗೂ ಮಾಸ್ಕ್ ಕಡ್ಡಾಯವಾಗಿದೆ. ಲಾಕ್‍ಡೌನ್ ಬಳಿಕ ಶುರುವಾಗುತ್ತಿರುವ ಮೆಟ್ರೋ ಪ್ರಯಾಣದಲ್ಲಿ ಟೋಕನ್ ಟಿಕೆಟ್‍ಗಳಿಗೆ ಅವಕಾಶ ಇರುವುದಿಲ್ಲ.
ಟೊಕನ್ ಕಾಯಿನ್ ಟಿಕೇಟ್‍ಗಳಿಂದ ಸೋಂಕು ಹರಡುವ ಭೀತಿ ಇದ್ದು, ಸ್ಮಾರ್ಟ್ ಕಾರ್ಡ್‍ಗೆ ಮಾತ್ರ ಅವಕಾಶ ನೀಡಿದೆ. ಈಗಾಗಲೇ ಎಲ್ಲ ಮೆಟ್ರೋ ನಿಲ್ದಾಣಗಳನ್ನು ಮತ್ತು ಮೆಟ್ರೋ ಕೋಚ್‍ಗಳನ್ನು ಸ್ಯಾನಿಟೈಜ್ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ. ಪ್ರತಿ ನಿಲ್ದಾಣದಲ್ಲೂ ಥರ್ಮಲ್ ಸ್ಕಾನರ್ ಅಳವಡಿಸಲಾಗುತ್ತಿದ್ದು, ಸಾಕಷ್ಟು ಎಚ್ಚರಿಕೆ ನಡುವೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.