ಬೆಂಗಳೂರು: ಕೊರೊನಾ ಮಹಾ ಸ್ಫೋಟದ ನಡುವೆ ಕೇಂದ್ರ ಸರ್ಕಾರ ಕೇವಲ ಕಂಟೈನ್ಮೆಂಟ್ ಝೋನ್ಗೆ ಮಾತ್ರ ಸೀಮಿತ ಆಗುವಂತೆ ಲಾಕ್ಡೌನ್ 5.ಓ ಘೋಷಣೆ ಆಗಿದೆ. ಇಂದು ಮಧ್ಯರಾತ್ರಿಯಿಂದ ಇಡೀ ದೇಶದಲ್ಲಿ ಹೊಸ ದುನಿಯಾ, ಹೊಸ ಲೈಫ್ ಶುರುವಾಗಲಿದೆ. ಜೊತೆಗೆ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಹೊಸ ಸವಾಲು ಎದುರಾಗಲಿದೆ.
Advertisement
ಅಂತರ್ ರಾಜ್ಯಗಳ ನಡುವಣ ಗಡಿಗಳು ಕಂಪ್ಲೀಟ್ ತೆರೆದುಕೊಳ್ಳಲಿವೆ. 200 ರೈಲುಗಳು ದೇಶಾದ್ಯಂತ ಸಂಚರಿಸಲಿವೆ. ಯಾರು ಎಲ್ಲಿ ಬೇಕಾದ್ರೂ ಓಡಾಡಲು ದೇಶದ ಜನತೆಗೆ ಕೊರೊನಾ ನಂತರ ಹೊಸದಾಗಿ ಸ್ವಾತಂತ್ರ್ಯ ಸಿಕ್ಕಿದೆ. ಈ ಸ್ವಾತಂತ್ರ್ಯವೇ ರಾಜ್ಯಕ್ಕೆ ಮುಳುವಾಗುವ ಸಾಧ್ಯತೆ ಇದೆ. ಸರ್ಕಾರವೇ ಹೇಳುವಂತೆ ಈಗಾಗಲೇ ವಿದೇಶಗಳಿಂದ, ಅನ್ಯರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದವರ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು. ಇವರನ್ನೆಲ್ಲಾ ಕ್ವಾರಂಟೈನ್ ಮಾಡಿ, ಸರಿಯಾಗಿ ನಿರ್ವಹಣೆ ಮಾಡಲಾಗದೇ ರಾಜ್ಯ ಸರ್ಕಾರ ಬಸವಳಿದು ಹೋಗಿದೆ.
Advertisement
Advertisement
ಈ ಕಷ್ಟ ಕೋಟಲೆಗಳ ನಡುವೆ ನಾಳೆಯಿಂದ ರಾಜ್ಯಕ್ಕೆ ಕೊರೋನಾ ಎಕ್ಸ್ ಪ್ರೆಸ್ ಗಳು ದಾಂಗುಡಿ ಇಡಲಿವೆ. ನಾಳೆಯಿಂದ ರಸ್ತೆ ಮತ್ತು ರೈಲು ಮಾರ್ಗದ ಮೂಲಕ ಪ್ರವಾಹದೋಪಾದಿಯಲ್ಲಿ ಬರುವವರನ್ನು ಹೇಗೆ, ಎಲ್ಲಿ ಕ್ವಾರಂಟೈನ್ ಮಾಡಬೇಕು? ಇವ್ರಲ್ಲಿ ಸೋಂಕಿತರನ್ನು ಪತ್ತೆ ಹಚ್ಚೋದು ಹೇಗೆ? ಎಂಬ ಬಗ್ಗೆ ರಾಜ್ಯ ಸರ್ಕಾರ ಇದೀಗ ತಲೆ ಕೆಡಿಸಿಕೊಂಡಿದೆ. ಶುಕ್ರವಾರ ಐದು ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಯಾರು ಬರೋ ಹಾಗಿಲ್ಲ. ರೈಲು, ರಸ್ತೆ ಮಾರ್ಗ ಬಂದ್ ಅಂತಾ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈಗ ಕೇಂದ್ರದ ಲಾಕ್ಡೌನ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಯಥಾವತ್ ಜಾರಿ ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಕಿಮ್ಮತ್ತು ಕಳೆದುಕೊಂಡಿದೆ. ಪರಿಣಾಮ ರಾಜ್ಯದಲ್ಲಿ ಮತ್ತೆ ಕೊರೋನಾ ಮಹಾ ಸ್ಫೋಟ ಆಗುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ.
Advertisement
ಮೂರು ದಾರಿ.. ಮೂರು ಅಪಾಯ
> ನಾಳೆಯಿಂದ ಕರ್ನಾಟಕಕ್ಕೆ ಅಂತಾರಾಜ್ಯ ರೈಲುಗಳ ಓಡಾಟ
> ಕೊರೊನಾ ಹಾಟ್ಸ್ಪಾಟ್ ನಗರಗಳಿಂದ ನಿತ್ಯ ರೈಲು ಸಂಚಾರ
> ಮುಂಬೈ, ದೆಹಲಿ, ಹೌರಾ, ದಾನಾಪುರದಿಂದ ಬೆಂಗಳೂರಿಗೆ ನಿತ್ಯ ರೈಲು
> ಪ್ರತಿನಿತ್ಯ ಮುಂಬೈನಿಂದ ಬೆಂಗಳೂರು, ಗದಗಕ್ಕೆ ಎಕ್ಸ್ಪ್ರೆಸ್ ರೈಲು
> ಅಂದಾಜು ನಿತ್ಯ 2 ಸಾವಿರ ಮಂದಿ ಮುಂಬೈನಿಂದ ಆಗಮನ
> ಕೊರೊನಾ ಪರೀಕ್ಷೆ ಇಲ್ಲದೆ ರೈಲು ಹತ್ತಲಿರುವ ಪ್ರಯಾಣಿಕರು!
> ಹೀಗೆ ಬಂದವರನ್ನು ಕ್ವಾರಂಟೇನ್ ಮಾಡೋದು ಎಲ್ಲಿ..? ಹೇಗೆ..?
ದಕ್ಷಿಣ ಮಧ್ಯೆ ರೈಲ್ವೇ ಪ್ರಕಟಣೆ ಹೊರಡಿಸಿದ್ದು, 90 ನಿಮಿಷಕ್ಕೆ ಮೊದಲೇ ಪ್ರಯಾಣಿಕರು ನಿಲ್ದಾಣದಲ್ಲಿ ಇರಬೇಕು. ಟಿಕೆಟ್ ಇರುವವರಿಗೆ ಮಾತ್ರ ರೈಲ್ವೇ ನಿಲ್ದಾಣಕ್ಕೆ ಎಂಟ್ರಿ, ಕೊರೊನಾ ಲಕ್ಷಣ ಇದ್ದರೆ ರೈಲು ಹತ್ತಲು ಬಿಡಲ್ಲ, ಎಸಿ ಕಂಪಾರ್ಟ್ಮೆಂಟ್ಗೆ ಹೊದಿಕೆ ನೀಡಲ್ಲ ಎಂದಿದೆ. ಚಿಕ್ಕ ಮಕ್ಕಳು, ವೃದ್ಧರು ಪ್ರಯಾಣ ಮಾಡಬಾರದು ಎಂದು ಮನವಿ ಮಾಡಿದೆ.