ಭುವನೇಶ್ವರ: ಕೊರೊನಾ ಸೋಂಕಿತ ಮಾವನನ್ನು ಸೊಸೆ ಹೆಗಲ ಮೇಲೆ ಹೋತ್ತು ಆಸ್ಪತ್ರೆಗೆ ಸಾಗಿಸಿರುವ ಘಟನೆ ಭವನೇಶ್ವರದಲ್ಲಿ ನಡೆದದಿದೆ.
Advertisement
ಅತ್ತೆ ಮಾವ ಅಂದರೆ ಮೂಗು ಮುರಿಯುವಂತಹ ಈ ಕಾಲದಲ್ಲಿ ಮಹಿಳೆ ಕೊರೊನಾ ಚಿಕಿತ್ಸೆಗಾಗಿ ತನ್ನ ಮಾವನನ್ನು ಹೊತ್ತು ಸಾಗುವ ಮೂಲಕವಾಗಿ ಮಾನವೀಯತೆ ಜೊತೆಗೆ ಸಂಬಂಧದ ಮೌಲ್ಯವನ್ನು ಸಾರಿದ್ದಾಳೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಯಾಮಿ ಗೌತಮ್
Advertisement
Advertisement
ತುಳೇಶ್ವರ್ ದಾಸ್(75) ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಈತನ ಮಗ ಸೂರಜ್ ಕೆಲಸದ ನಿಮಿತ್ತ ಬೇರೆ ಊರಿನಲ್ಲಿ ವಾಸವಾಗಿದ್ದಾನೆ. ಹೀಗಾಗಿ ಮನೆಯ ಪೂರ್ತಿ ಜವಾಬ್ದಾರಿ ಸೊಸೆ ನಿಹಾರಿಕಾ ಮೇಲೆ ಇತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಏನು ಮಾಡುವುದು ಗೊಂದಲಕ್ಕೀಡಾದ ನಿಹಾರಿಕ ಮಾವನನ್ನು ಹೊತ್ತುಕೊಂಡು ಕೋವಿಡ್ ಸೆಂಟರ್ಗೆ ತೆರೆಳಿದ್ದಾಳೆ. ಇದನ್ನೂ ಓದಿ: ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ‘ಗೋ’ರಕ್ಷಣೆ? – ಕುಮಾರಸ್ವಾಮಿ
Advertisement
ಮಾವನನ್ನು ಆಸ್ಪತ್ರೆಗೆ ದಾಳಲಿಸಿದ ಸೊಸೆ ನಿಹಾರಿಕಳನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ವೈದ್ಯರು ಸೂಚನೆ ನೀಡಿದ್ದಾರೆ. ಮಾವನೊಬ್ಬನನ್ನೇ ಕೊರೊನಾ ಕೇಂದ್ರಕ್ಕೆ ಕಳುಹಿಸಲು ನಿಹಾರಿಕಾ ನಿರಾಕರಿಸಿದ್ದಾಳೆ. ಇದಕ್ಕೆ ಸ್ಪಂದಿಸಿದ ಆಸ್ಪತ್ರೆ ಸಿಬ್ಬಂದಿ ಅಂಬ್ಯುಲೆನ್ಸ್ನಲ್ಲಿ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ತನ್ನ ಪ್ರಾಣ ಲೆಕ್ಕಿಸದೇ ಕೊರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಧಾವಿಸಿದ ನಿಹಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.