ಮಡಿಕೇರಿ: ರಸ್ತೆ ಮಧ್ಯದಲ್ಲಿ ಬರುತ್ತಿದ್ದವನಿಗೆ ಸೈಡ್ ಸರಿಯುವಂತೆ ಬಸ್ ಚಾಲಕ ಹಾರ್ನ್ ಮಾಡಿದ್ದಾನೆ. ಈ ವೇಳೆ ಅವಾಜ್ ಹಾಕಿದ ದಾರಿಹೋಕನಿಗೆ ಬಸ್ ನಿರ್ವಾಹಕ ಗೂಸಾ ಕೊಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ಬಸ್ಸು ನಿಲ್ದಾಣದಿಂದ ಮಂಗಳೂರು ರಸ್ತೆ ಕಡೆಗೆ ಬಸ್ ಹೋಗುತ್ತಿತ್ತು. ಈ ವೇಳೆ ದಾರಿ ಮಧ್ಯದಲ್ಲಿ ಹೋಗುತ್ತಿದ್ದ ದಾರಿಹೋಕನಿಗೆ ದೂರ ಸರಿಯುವಂತೆ ಹಾನ್9 ಮಾಡಿದ್ದಾರೆ. ಬಸ್ಸು ಹಾರ್ನ್ ಕೇಳಿದರೂ ಕೇಳದಂತೆ ಇದ್ದಾನೆ. ಈ ವೇಳೆ ಬಸ್ಸು ಚಾಲಕ ಇಳಿದು ಸೈಡಿನಲ್ಲಿ ಹೋಗಲು ಅಗಲ್ಲವೇ ಎಂದು ಕೇಳಿದ್ದಾರೆ.
Advertisement
Advertisement
ದಾರಿಹೋಕ ಬಸ್ಸು ಚಾಲಕನಿಗೆ ಅವಾಜ್ ಹಾಕಿ ಹಾರ್ನ್ ಮಾಡ್ತೀಯಲ್ಲ. ನಾನ್ಯಾರು ಗೊತ್ತೇನೋ ನಾನು ಮಂಡ್ಯದವನು ಗೊತ್ತ ಎಂದು ಧಮಕಿ ಹಾಕಿದ್ದಾನೆ. ಬಸ್ಸು ಚಾಲಕ ವಿನಯದಿಂದ ಆಯ್ತು ಸೈಡಿಗೆ ಹೋಗು ಎಂದು ಹೇಳಿದ್ದಾರೆ. ಆದರೆ ಮಾತು ಕೇಳದ ದಾರಿಹೋಕನಿಗೆ ಬಸ್ಸು ನಿರ್ವಾಹಕ ಪೂವಯ್ಯ ಅವರು ಸ್ಥಳದಲ್ಲೇ ಗೂಸಾ ಕೊಟ್ಟಿದ್ದಾರೆ.
Advertisement
Advertisement
ನಿರ್ವಾಹಕನಿಂದ ಗೂಸ ತಿಂದ ದಾರಿಹೋಕ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಘಟನೆ ನಡೆದಿದೆ. ಸಾರ್ವಜನಿಕರು ಹಾಗೂ ಬಸ್ಸಿನಲ್ಲಿ ಇದವರು ದಾರಿಹೋಕನಿಗೆ ಹಿಡಿಶಾಪ ಹಾಕಿದ್ದಾರೆ.