ಸುಶಾಂತ್ ಪ್ರಕರಣ- ಸಿಬಿಐನಿಂದ ಘಟನೆಯ ಮರುಸೃಷ್ಟಿ

By
1 Min Read

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಕೈಗೆತ್ತಿಕೊಂಡಿರುವ ಸಿಬಿಐ ನಿನ್ನೆಯಿಂದ ಹಲವು ಮಾಹಿತಿಗಳನ್ನು ಕಲೆ ಹಾಕುವಲ್ಲಿ ನಿರತವಾಗಿದೆ. ಸುಶಾಂತ್ ವಾಸವಾಗಿದ್ದ ಬಾಂದ್ರಾ ನಿವಾಸಕ್ಕೆ ತೆರಳಿದ್ದ ಅಧಿಕಾರಿಗಳು, ಜೂನ್ 14ರ ಘಟನೆಯನ್ನು ಮರುಸೃಷ್ಟಿ ಮಾಡಿದ್ದಾರೆ ಎಂದು ವರದಿಯಾಗಿದೆ.

ವಿಧಿವಿಜ್ಞಾನ ಅಧಿಕಾರಿಗಳ ತಂಡದ ಸಮ್ಮುಖದಲ್ಲಿ ಸಿಬಿಐ ಮನೆಯನ್ನ ಪರಿಶೀಲನೆ ನಡೆಸಿದೆ. ಈಗಾಗಲೇ ಸುಶಾಂತ್ ಸಾವು ಹೇಗಾಯ್ತು ಎಂದು ಮುಂಬೈ ಪೊಲೀಸರು ಪ್ರಾಥಮಿಕ ತನಿಖೆ ಆಧಾರದ ಮೇಲೆ ಘಟನೆಯನ್ನ ಮರುಸೃಷ್ಟಿಸಲಾಗಿದೆ. ಸುಶಾಂತ್ ಶವ ನೇತಾಡುತ್ತಿದ್ದ ದೃಶ್ಯವನ್ನ ರಿ ಕ್ರಿಯೇಟ್ ಮಾಡಿ ಬರೋಬ್ಬರಿ 6 ಗಂಟೆ ತನಿಖೆ ನಡೆಸಿದ್ದಾರೆ ಎಂದು ಸುದ್ದಿಗಳು ಬಿತ್ತರವಾಗಿವೆ.

ಸುಶಾಂತ್ ನಿವಾಸಕ್ಕೆ ಮಧ್ಯಾಹ್ನ 2 ಗಂಟೆಗೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿದ್ದರು. ಜೂನ್ 14ರಂದು ಸುಶಾಂತ್ ಮನೆಯಲ್ಲಿದ್ದ ಅಡುಗೆ ಮಾಡುವ ವ್ಯಕ್ತಿ ನೀರಜ್, ಗೆಳೆಯ ದೀಪೇಶ್ ಮತ್ತು ಮ್ಯಾನೇಜರ್ ಸಿದ್ಧಾರ್ಥ್ ಪಿಠಾಣಿಯನ್ನ ಜೊತೆಯಲ್ಲಿ ಕರೆತಂದಿದ್ದರು. ಇನ್ನು ಕಟ್ಟಡದ ಸೆಕ್ಯೂರಿಟಿ ಗಾರ್ಡ್ ನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾತ್ರಿ ಸುಮಾರು 8 ಗಂಟೆಗೆ ಸಿಬಿಐ ಅಧಿಕಾರಿಗಳು ಮನೆಯಿಂದ ಹೊರ ಬಂದಿದ್ದಾರೆ. ಬರೋಬ್ಬರಿ ಆರು ಗಂಟೆಗಳ ಕಾಲ ಸುಶಾಂತ್ ಮನೆಯನ್ನ ಪರಿಶೀಲನೆ ನಡೆಸಿದ್ದಾರೆ.

Share This Article
Exit mobile version