– ಒಂದು ಸಿಕ್ಸರ್ ಸಿಡಿಸಿ ಧೋನಿ ದಾಖಲೆ
ಅಬುಧಾಬಿ: ಇಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ವೀಕೆಂಡ್ ಧಮಾಕದ ಎರಡನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 37 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ.
ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಅವರ 90 ರನ್ಗಳ ಕಾಣಿಕೆಯಿಂದ ನಿಗದಿತ 20 ಓವರಿನಲ್ಲಿ 169 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಕ್ರಿಸ್ ಮೋರಿಸ್ ಅವರ ಮಾರಕ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಎಂಟು ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ 37 ರನ್ಗಳ ಅಂತರದಲ್ಲಿ ಸೋಲುಂಡಿತು.
Advertisement
Advertisement
ಸುಂದರ್ ಸ್ಪಿನ್ ಮೋಡಿ: ಇಂದು ಬೆಂಗಳೂರು ತಂಡ ಬೌಲರ್ಸ್ ಗಳು ಚೆನ್ನೈ ತಂಡದ ಬ್ಯಾಟ್ಸ್ ಮ್ಯಾನ್ಗಳನ್ನು ಕಾಡಿದರು. ಪವರ್ ಪ್ಲೇನಲ್ಲೇ ಮಾರಕ ದಾಳಿ ಮಾಡಿದ ವಾಷಿಂಗ್ಟನ್ ಸುಂದರ್ ಅವರು ಆರಂಭಿಕರನ್ನು ಔಟ್ ಮಾಡಿ ಪೆವಿಲಿಯನ್ಗೆ ಅಟ್ಟಿದರು. ಮೂರು ಓವರ್ ಬೌಲ್ ಮಾಡಿದ ಅವರು ಎರಡು ವಿಕೆಟ್ ಪಡೆದು 16 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಕ್ರಿಸ್ ಮೋರಿಸ್ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 19 ರನ್ ನೀಡಿದರು.
Advertisement
ಈ 'ಸುಂದರ' ಬೆಳದಿಂಗಳ,
ದುಬೈನ ಅಂಗಳದಲಿ
ವಿಕೆಟ್ಗಳ ನಡುವಿನಲಿ????
.
.
.
ನೋಡ್ತಾ ಇರಿ, #CSKvRCB
ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ #Dream11IPL pic.twitter.com/J3DY85lAN0
— Star Sports Kannada (@StarSportsKan) October 10, 2020
Advertisement
ಧೋನಿ ದಾಖಲೆ: ಇಂದು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಚೆನ್ನೈ ನಾಯಕ ಧೋನಿಯವರು 6 ಬಾಲಿಗೆ 10 ರನ್ ಸಿಡಿಸಿ ಔಟ್ ಆದರು. ಆದರೆ ಯುಜ್ವೇಂದ್ರ ಚಹಲ್ ಅವರ ಬಾಲಿಗೆ ಒಂದು ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲಿ ಭಾರತೀಯನಾಗಿ 300 ಸಿಕ್ಸರ್ ಭಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅವರು ಮೊದಲ ಸ್ಥಾನದಲ್ಲಿದ್ದು, ನಂತರ ಎರಡನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ ಅವರು ಇದ್ದಾರೆ.
170 ರನ್ ಬೆನ್ನಟ್ಟಿದ ಚೆನ್ನೈ ತಂಡ ಮಂದಗತಿಯ ಬ್ಯಾಟಿಂಗ್ ಮುಂದಾಯ್ತು. ಅನುಭವಿ ಆರಂಭಕರಾದ ಶೇನ್ ವ್ಯಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ನಿಧಾನವಾಗಿ ಆಡುತ್ತಿದ್ದರು. ಆದರೆ ಮೂರನೇ ಓವರಿನ ಕೊನೆಯ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಫಾಫ್ ಡು ಪ್ಲೆಸಿಸ್ ಅವರು 8 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಅವರಿಗೆ ಔಟ್ ಆದರು. ನಂತರ 5ನೇ ಓವರ್ 4ನೇ ಬಾಲಿನಲ್ಲಿ 14 ರನ್ಗಳಿಸಿದ್ದ ಶೇನ್ ವ್ಯಾಟ್ಸನ್ ಅವರು ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ನಲ್ಲಿ ಬೌಲ್ಡ್ ಆದರು.
All #RCB fans right now ????????#Dream11IPL pic.twitter.com/4XBYsnNmb5
— IndianPremierLeague (@IPL) October 10, 2020
ಆರಂಭಿಕ ಆಘಾತಕೊಳಗಾದ ಚೆನ್ನೈ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 26 ರನ್ ಸೇರಿಸಿತು. ನಂತರ ಜೊತೆಯಾದ ಅಂಬಾಟಿ ರಾಯುಡು ಮತ್ತು ಎನ್ ಜಗದೀಸನ್ ನಿಧಾನವಾಗಿ ರನ್ ಸೇರಿಸಿದರು. ಪರಿಣಾಮ ಚೆನ್ನೈ 10 ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 47 ರನ್ ಸೇರಿಸಿತು. ನಂತರ ಅದ್ಭುತವಾಗಿ ಬ್ಯಾಟ್ ಬೀಸಿದ ಜಗದೀಸನ್ ಮತ್ತು ರಾಯುಡು ಅರ್ಧಶತಕದ ಜೊತೆಯಾಟವಾಡಿದರು.
That's that from Match 25. #RCB win by 37 runs and register their fourth victory of #Dream11IPL 2020. pic.twitter.com/0WncvUTDqW
— IndianPremierLeague (@IPL) October 10, 2020
ಇದಾದ ನಂತರ 28 ಬಾಕಿಗೆ 33 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಜಗದೀಸನ್ ಅವರು ಇಲ್ಲದ ರನ್ ಕದಿಯಲು ಹೋಗಿ ಕ್ರಿಸ್ ಮೋರಿಸ್ ಅವರಿಂದ ರನೌಟ್ ಆಗಿ ಹೊರನೆಡದರು. ನಂತರ ಬಂದ ಒಂದು ಸಿಕ್ಸರ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದ ಧೋನಿ 6 ಬಾಲಿಗೆ 10 ರನ್ ಸಿಡಿಸಿ ಬೌಂಡರಿ ಬಳಿ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಬಂದ ಸ್ಯಾಮ್ ಕರ್ರನ್ ಅವರು ಸೊನ್ನೆ ರನ್ ಹೊಡೆದು ಕ್ರಿಸ್ ಮೋರಿಸ್ ಅವರಿಗೆ ಔಟ್ ಆದರು.
Two quick wickets here for #RCB. MS Dhoni and Sam Curran depart.
Live – https://t.co/uvoAQpsvDX #Dream11IPL pic.twitter.com/TENoB1En4X
— IndianPremierLeague (@IPL) October 10, 2020
ನಂತರ 40 ಬಾಲಿಗೆ 42 ರನ್ಗಳಿಸಿ ಆಡುತ್ತಿದ್ದ ಅಂಬಟಿ ರಾಯುಡು ಅವರು ಸಲ್ಲದ ಹೊಡೆತಕ್ಕೆ ಕೈ ಹಾಕಿ 17ನೆ ಓವರಿನ 3ನೇ ಬಾಲಿನಲ್ಲಿ ಇಸುರು ಉದಾನಾ ಅವರಿಗೆ ಬೌಲ್ಡ್ ಆದರು. ನಂತರ ಫುಟ್ ಬಾಲನ್ನು ಸಿಕ್ಸರ್ ಗೆ ಹೊಡೆಯಲು ಪ್ರಯತ್ನಿಸಿದ ಡ್ವೇನ್ ಬ್ರಾವೋ ಅವರು ಕ್ರಿಸ್ ಮೋರಿಸ್ ಅವರಿಗೆ ಔಟ್ ಆದರು. ನಂತರ ಅದೇ ಓವರಿನಲ್ಲಿ ರವೀಂದ್ರ ಜಡೇಜಾ ಅವರು ಕೂಡ ಔಟ್ ಆಗಿ ಹೊರನಡೆದರು.