ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಂತರಿಕ ಕಲಹ ಶಮನಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಸೂಪರ್ ಪ್ಲಾನ್ ಮಾಡಿಕೊಂಡಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಇಬ್ಬರು ನಾಯಕರು ಮೇಲ್ನೋಟಕ್ಕೆ ಒಂದು ಎಂಬಂತೆ ಇದ್ರೂ ಪಕ್ಷದ ಆಂತರಿಕ ವಿಚಾರದಲ್ಲಿ ಭಿನ್ನ ಭಿನ್ನ ಆಲೋಚನೆಗಳನ್ನ ಹೊಂದಿದ್ದಾರೆ ಅನ್ನೋದು ಕೈ ಅಂಗಳದಲ್ಲಿ ಹರಿದಾಡುವ ಪ್ರತಿನಿತ್ಯದ ಸುದ್ದಿ. ಮೈಸೂರು ಮೇಯರ್ ಎಲೆಕ್ಷನ್ ಇಬ್ಬರ ಆಂತರಿಕ ಕಲಹಕ್ಕೆ ಮತ್ತಷ್ಟು ತುಪ್ಪ ಸುರಿದಿದೆ ಎನ್ನಲಾಗಿದೆ. ಕಾಂಗ್ರೆಸ್ ನಲ್ಲಿಯೂ ಸಿದ್ದರಾಮಯ್ಯ ಬಣ ಮತ್ತು ಡಿ.ಕೆ.ಶಿವಕುಮಾರ್ ಬಣಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಲೂ ಇರುತ್ತವೆ. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ರಚನೆ ಮಾಡಿದ್ದು, ಕೆಲವೇ ದಿನಗಳಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
Advertisement
Advertisement
ಏನದು ಪ್ಲಾನ್?: ಪಕ್ಷದ ಇಮೇಜ್ ಹೆಚ್ಚಿಸಲು ಮತ್ತು ಆಂತರಿಕ ಕಲಹ ಶಮನಕ್ಕಾಗಿ 20 ಸದಸ್ಯರ ಥಿಂಕ್ ಟ್ಯಾಂಕ್ ಟೀಂ ರಚಿಸಲು ಮುಂದಾಗಿದೆ. ಈ ಟೀಂನಲ್ಲಿ ಪಕ್ಷದ 20 ನಾಯಕರು ಇರಲಿದ್ದಾರೆ. ಪಕ್ಷದಲ್ಲಿ ಏನೇ ತೀರ್ಮಾನ ಮಾಡಿದರೂ. 20 ನಾಯಕರು ಸೇರಿಯೇ ಮಾಡಬೇಕು. ಈ ಸಂಬಂಧ ಹೈಕಮಾಂಡ್ ಕೆಪಿಸಿಸಿಗೆ ಸಂದೇಶ ರವಾನಿಸಿದೆ ಎನ್ನಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಕಲಹಕ್ಕೆ ತೆರೆ ಎಳೆಯಲು ಮುಂದಾಗಿದೆ ಎನ್ನಲಾಗಿದೆ.
Advertisement